ಆರ್ಥಿಕ ಹೊರೆ ತಗ್ಗಿಸುವ ಉದ್ದೇಶ: ಅನ್ನಭಾಗ್ಯ- ಅಂತ್ಯೋದಯ ಅಕ್ಕಿ ಪ್ರಮಾಣ ಕಡಿತ.! - BC Suddi
ಆರ್ಥಿಕ ಹೊರೆ ತಗ್ಗಿಸುವ ಉದ್ದೇಶ: ಅನ್ನಭಾಗ್ಯ- ಅಂತ್ಯೋದಯ ಅಕ್ಕಿ ಪ್ರಮಾಣ ಕಡಿತ.!

ಆರ್ಥಿಕ ಹೊರೆ ತಗ್ಗಿಸುವ ಉದ್ದೇಶ: ಅನ್ನಭಾಗ್ಯ- ಅಂತ್ಯೋದಯ ಅಕ್ಕಿ ಪ್ರಮಾಣ ಕಡಿತ.!

 

ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿದ್ದು, ಆ ನಂತರ  ಅಂತ್ಯೋದಯ ಕಾರ್ಡ್ ಅಕ್ಕಿಯನ್ನು ಕೂಡ ಕಡಿತ ಮಾಡಲು ನಿರ್ಧರಿಸಲಾಗಿದ್ದು 35 ಕೆಜಿ ಅಕ್ಕಿಯ ಬದಲು 15 ಕೆಜಿ ಅಕ್ಕಿ ಜೊತೆಗೆ 20 ಕೆಜಿ ರಾಗಿ ವಿತರಣೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆಯಂತೆ

ಅನ್ನಭಾಗ್ಯ ಯೋಜನೆಯಡಿ ದಕ್ಷಿಣ ಕರ್ನಾಟಕದಲ್ಲಿ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ, ಪ್ರತಿ ಕಾರ್ಡ್ ಗೆ 2 ಕೆಜಿ ಗೋಧಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ 2 ಕೆಜಿ ಅಕ್ಕಿ, 3 ಕೆಜಿ ಜೋಳ, ಪ್ರತಿ ಕಾರ್ಡ್ ಗೆ 2 ಕೆಜಿ ಗೋಧಿ ನೀಡಲಾಗುವುದು. ಏಪ್ರಿಲ್ 1 ರಿಂದ ಹೊಸ ವ್ಯವಸ್ಥೆಯಡಿ ಪಡಿತರ ವಿತರಿಸಲು ಆಹಾರ ಇಲಾಖೆ ಕ್ರಮಕೈಗೊಂಡಿದೆ.

error: Content is protected !!