ನವದೆಹಲಿ:  ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಜನರು ಸರ್ಕಾರದ ವಿರುದ್ಧ ಮತ್ತೊಮ್ಮೆ ಹೊಸ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ರಾಜಧಾನಿ ಕೊಲೊಂಬೊದಲ್ಲಿ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ, ಕೈಯಲ್ಲಿ ಖಾಲಿ ಗ್ಯಾಸ್‌ ಸಿಲಿಂಡರ್‌ ಹಿಡಿದು ಜನರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತ ಬೀದಿಗಿಳಿದಿದ್ದಾರೆ.

‘ಮನೆಯಲ್ಲಿ ಗ್ಯಾಸ್‌(Gas) ಇಲ್ಲ, ತಿನ್ನಲು ಏನೂ ಇಲ್ಲ. ಕಳೆದ 2 ತಿಂಗಳಿನಿಂದ ನಮಗೆ ಗ್ಯಾಸ್‌ ಪೂರೈಕೆಯನ್ನು ಮಾಡಲಾಗುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಯಾತ್ರಿಕರ ಬಸ್‌ನಲ್ಲಿ ಬಾಂಬ್ ಸ್ಫೋಟ -ನಾಲ್ವರು ಮೃತ್ಯು, 22 ಮಂದಿಗೆ ಗಾಯ

ಪ್ರಧಾನಿ ಮಹಿಂದಾ ರಾಜಪಕ್ಸೆಯವರ ರಾಜೀನಾಮೆ ಬೆನ್ನಲ್ಲೇ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 9 ಜನರು ಬಲಿಯಾಗಿದ್ದರು. ಹೊಸ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಹೊಸ ಸರ್ಕಾರ ರಚನೆ ಮಾಡಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿಸಲು ದೇಶಾದ್ಯಂತ ಕರ್ಫ್ಯೂವನ್ನು 12 ಗಂಟೆಗಳ ಕಾಲ ಹಿಂಪಡೆಯಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಖಾಲಿ ಸಿಲಿಂಡರ್‌ ಹಿಡಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.