ಬಾಲಿವುಡ್​​ನ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದ ಮೂಲಕ ಫೇಮಸ್ ಆಗಿದ್ದ ನಟಿ ಕಂಗನಾ ಶರ್ಮಾ ಇದೀಗ ಹರಿಯಾಣದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು, ಜಾಹೀರಾತುಗಳಲ್ಲಿ ನಟಿಸಿರುವ ಅವರು, ಆಪ್​ ಪಕ್ಷ ಸೇರಿದ್ದಾರೆ. ಎಎಪಿ ನರ್ವಾನದ ಅಧಿಕೃತ ಟ್ವಿಟರ್​ ಹ್ಯಾಂಡಲ್ ಕೂಡ ಅವರ ಚಿತ್ರಗಳನ್ನು ಹಂಚಿಕೊಂಡಿದೆ ಮತ್ತು ನಟಿಯನ್ನು ಪಾರ್ಟಿಗೆ ಸ್ವಾಗತಿಸಿದೆ. ಅರವಿಂದ್ ಕೇಜ್ರಿವಾಲ್ ಪ್ರಭಾವದಿಂದ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.