ಚಿತ್ರದುರ್ಗ : ಐಮಂಗಲ ಮತ್ತು ಜೆ.ಎನ್.ಕೋಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಆಗಸ್ಟ್ 06ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಐಮಂಗಲ ಹಾಗೂ ಜೆ.ಎನ್.ಕೋಟೆಯಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗುಯಿಲಾಳು, ತವಂದಿ, ಭರಂಪುರ, ಕಲ್ಲಹಟ್ಟಿ, ಕೊಂವಾರಟ್ಟಿ, ಮರಡಿಹಳ್ಳಿ, ಐಮಂಗಲ, ಬುರುಜನರೊಪ್ಪ, ತಾಳವಟ್ಟಿ, ಪಾಲವ್ವನಹಳ್ಳಿ, ನೊಣಬಿ, ಮಲ್ಲರಸನಹಟ್ಟಿ, ಹುಲಿತೊಟ್ಲು, ಜೆ.ಎನ್.ಕೋಟೆ, ಪಲ್ಲವಗೆರೆ, ಸಜ್ಜನಕೆರೆ, ಜೆ.ಸಿ.ಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ  ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.