ಆಕ್ಸಿಜನ್ ಸರಬರಾಜು, ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತ..! - BC Suddi
ಆಕ್ಸಿಜನ್ ಸರಬರಾಜು, ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತ..!

ಆಕ್ಸಿಜನ್ ಸರಬರಾಜು, ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತ..!

 

ನವದೆಹಲಿ: ಕೇಂದ್ರ ಸರ್ಕಾರ ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತಕ್ಕೆ ಆದೇಶ ನೀಡಿದೆ. ಆಕ್ಸಿಜನ್ ಸರಬರಾಜು, ವ್ಯಾಕ್ಸಿನ್ ಆಮದಿಗೂ ಸುಂಕ ಕಡಿತಗೊಳಿಸಿದೆ. ಸೀಮಾ ಸುಂಕದಿಂದ ಕೊರೊನಾ ವ್ಯಾಕ್ಸಿನ್ಗೆ ವಿನಾಯಿತಿ ನೀಡಲಾಗಿದ್ದು, ಆಮದಿಗೆ ವಿಧಿಸಲಾಗುತ್ತಿದ್ದ ಹೆಲ್ತ್ ಸೆಸ್ ಕೂಡ ರದ್ದು ಮಾಡಲಾಗಿದೆ. 3 ತಿಂಗಳವರೆಗೆ ಈ ತೆರಿಗೆ ವಿನಾಯಿತಿಗಳು ಅನ್ವಯವಾಗಲಿವೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಆಕ್ಸಿಜನ್ ಸರಬರಾಜು, ವ್ಯಾಕ್ಸಿನ್ ಆಮದು ಮೇಲಿನ ಸುಂಕ ಕಡಿತಗೊಳಿಸಿರುವುದರಿಂದ ಈ ವೈದ್ಯಕೀಯ ಉಪಕರಣಗಳು ಈಗ ಅಗ್ಗವಾಗಲಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ ಎಂದು ಹೇಳಲಾಗುತ್ತದೆ.

ಇಂತಹ ಉಪಕರಣಗಳ ಸರಬರಾಜಿಗೆ ಯಾವುದೇ ಅಡೆತಡೆ ಇಲ್ಲದೆ ಸುಲಲಿತವಾಗಿ ಸಾಗಾಟವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ.