ಆಕ್ಸಿಜನ್ ಟ್ಯಾಂಕರ್ ಸೋರಿಕೆ: 22 ಮಂದಿನ ರೋಗಿಗಳ ಸಾವು.! - BC Suddi
ಆಕ್ಸಿಜನ್ ಟ್ಯಾಂಕರ್ ಸೋರಿಕೆ: 22 ಮಂದಿನ ರೋಗಿಗಳ ಸಾವು.!

ಆಕ್ಸಿಜನ್ ಟ್ಯಾಂಕರ್ ಸೋರಿಕೆ: 22 ಮಂದಿನ ರೋಗಿಗಳ ಸಾವು.!

 

ಮಹಾರಾಷ್ಟ್ರ: ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿ ಅರ್ಧ ಘಂಟೆಗಳ ಕಾಲ ಆಮ್ಲಜನಕ ಸರಬರಾಜು ನಿಂತ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದ  22 ರೋಗಿಗಳು ಮೃತಪಟ್ಟ ಘಟನೆ ನಾಸಿಕ್ನ ಝಾಕಿತ್ ಹುಸೇನ್ ಆಸ್ಪತ್ರೆಯ ಹೊರಭಾಗದಲ್ಲಿ  ನಡೆದಿದೆ.

ಆಮ್ಲಜನಕದ ಸರಬರಾಜು ನಿಲುಗಡೆಯಾದ ಕಾರಣ ರೋಗಿಗಳ ಸಂಬಂಧಿಕರು ಕಂಗಾಲಾದರು. ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ರೋಗಿಗಳು ವೆಂಟಿಲೇಟರ್ನ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 22 ರೋಗಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ರೋಗಿಗಳು ಕೊವಿಡ್ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ರಾಜೇಶ್ ಟೋಪೆ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಈ ದುರ್ಘಟನೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗುವುದು’ ಎಂದು ತಿಳಿಸಿದ್ದಾರೆ.