ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿಯ ನಡುವೆಯೂ 6 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ. ಈ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಕಾರಣದಿಂದ ಸ್ಥಗಿತಗೊಳಿಸಿದ್ದಂತ ಬಿಸಿಯೂಟ ಕಾರ್ಯಕ್ರಮವನ್ನು 2021ರ ಅಕ್ಟೋಬರ್ 21ರಿಂದ ಪುನರಾರಂಭಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಅಧಿಕೃತ ಜ್ಞಾಪನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021ರ ಅಕ್ಟೋಬರ್ 21ರಿಂದ ಮಧ್ಯಾಹ್ನ ಉಪಹಾರ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಕಚೇರಿಯಿಂದ ಸೂಚನೆ ನೀಡಿರುತ್ತಾರೆ. ಈ ಸಂಬಂಧ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಆರಂಭಿಸಲು ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ, ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ನೀಡುವಂತೆ ತಿಳಿಸಿದೆ.

ಹುಬ್ಬಳ್ಳಿ: ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

ಶಾಲೆಗಳಲ್ಲಿ ಅಡುಗೆಯನ್ನು ತಯಾರು ಮಾಡುವ ಆಹಾರ ಧಾನ್ಯಗಳ ದಾಸ್ತಾನುಗಳ್ನು ಪರಿಶೀಲಿಸಿಕೊಳ್ಳುವುದು. ಯಾವುದೇ ಅವಧಿ ಮೀರಿರುವ ಆಹಾರ ಧಾನ್ಯಗಳನ್ನು ಬಳಕೆ ಮಾಡದಂತೆ ಹಾಗೂ ಪರಿಶೀಲಿಸಿಕೊಳ್ಳುವುದು. ಶಾಲೆಗಳಲ್ಲಿ ಗ್ಯಾಸ್ ಸ್ಟೌವ್ ಮತ್ತು ಪಾತ್ರೆ ಪರಿಕರಗಳನ್ನು ದುರಸ್ತಿ ಹೊಂದಿದ್ದಲ್ಲಿ, ನಿಯಮಾನುಸಾರ ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾವನ್ನು (ರೂ.5 ಸಾವಿರದಿಂದ 8 ಸಾವಿರದ ಒಳಗೆ) ಬಳಕೆ ಮಾಡಿಕೊಂಡು ರಿಪೇರಿ ಮಾಡಿಸುವಂತೆ ತಿಳಿಸುವುದು. ಶಾಲೆಯ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸುವುದು. ಆಹಾರ ದಾಸ್ತಾನು ಕೊಠಡಿಯನ್ನ ಡೀಪ್ ಕ್ಲಿನಿಂಗ್ ಮಾಡುವುದು. ಶಾಲೆಯಲ್ಲಿರುವ ಶೌಚಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಅಗತ್ಯ ಕ್ರಮ ವಹಿಸುವುದು. ಅಡುಗೆ ಸಿಬ್ಬಂದಿ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಆದೇಶಿಸಿದೆ.

ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ‘ಎರಡು ಡೋಸ್’ ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡಿರಬೇಕು. ಶಾಲಾ ವಿದ್ಯಾರ್ಥಿಗಳು ಕೈತೊಳೆಯಲು ನೀರಿನ ವ್ಯವಸ್ಥೆಯೊಂದಿಗೆ ಹ್ಯಾಂಡ್ ವಾಷಿಂಗ್ ಯುನಿಟ್‍ಗಳನ್ನು ರಿಪೇರಿ ಮಾಡಿಸಿ ಸ್ವಚ್ಛವಾಗಿಟ್ಟು ಪ್ರತಿನಿತ್ಯ ಕೈತೊಳೆಯಲು ಉಪಯೋಗಿಸುವುದು. ಕಾಲಕಾಲಕ್ಕೆ ಕೋವಿಡ್-19ರ ಪರೀಕ್ಷೆಯನ್ನು ಮಾಡಿಸಿಕೊಂಡಿರುವುದನ್ನು ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.