ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಅಲಂಕರಿಸಿದ್ದು, ಅಧಿಕಾರ ಸ್ವೀಕಾರಕ್ಕೂ ಮುನ್ನ ಅವರು ಪೂಜೆ, ಹೋಮ, ನಮಾಜ್ ಮಾಡಿದ್ದಾರೆ.

ಐ.ವೈ.ಸಿ. ಒಪ್ಪಂದದ ಪ್ರಕಾರ ಇವತ್ತಿಗೆ ರಕ್ಷಾ ರಾಮಯ್ಯ ಅಧಿಕಾರದ ಅವಧಿ ಮುಕ್ತಾಯವಾಗಿದೆ. ಇಂದು ಬೆಳಗ್ಗೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿರುವ ಯುವ ಕಾಂಗ್ರೆಸ್ ಅಧ್ಯಕ್ಷರ ಕಚೇರಿಯಲ್ಲಿ ನಲಪಾಡ್ ಅವರು ಪೂಜೆ, ಹೋಮ-ಹವನ ಹಾಗೂ ನಮಾಜ್​ ಮಾಡೋ ಮೂಲಕ ಅಧಿಕಾರ ಸ್ವೀಕರಿಸಿದರು.

ಯುವ ಅಧ್ಯಕ್ಷ ನಲಪಾಡ್​​ಗೆ ಯುವ ಮುಖಂಡರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ನಲಪಾಡ್ ತಂದೆ, ಕಾಂಗ್ರೆಸ್ ಶಾಸಕ, ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.