ಮೈಸೂರು: ಅಕ್ರಮ ಗಣಿಗಾರಿಕೆ ವರದಿಯಲ್ಲಿ ಮೂವರು ಮಾಜಿ ಸಿಎಂಗಳ ಹೆಸರು ನೀಡಿದ್ದೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಹೆಸರೂ ಇತ್ತು. ಆದರೆ ಲೋಕಾಯುಕ್ತ ರದ್ದು ಮಾಡಿ ACB ರಚಿಸಿದರು.
ನಮ್ಮಲ್ಲಿ ಭ್ರಷ್ಟಾಚಾರಿಗೂ 7 ವರ್ಷ ಮಾತ್ರ ಜೈಲು. ಹಣ ಇದ್ದವನಿಗೆ ಸಲಾಂ, ಜೈಲಿಂದ ಬಂದವನಿಗೆ ಸನ್ಮಾನ. ಭ್ರಷ್ಟಾಚಾರಕ್ಕೆ ಮದ್ದಿಲ್ಲ, ಪ್ರಾಮಾಣಿಕತೆಗೆ ಬೆಲೆ ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.