ಚೆನ್ನೈನಲ್ಲಿ ಶನಿವಾರ ನಡೆದ 61ನೇ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 100 ಮೀಟರ್ ಓಟದಲ್ಲಿ ಭಾರತದ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ.

11.43 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಹಿಮಾ ಜಯ ಗಳಿಸಿದರು. ಒಲಿಂಪಿಯನ್ ದ್ಯುತಿ ಚಂದ್ 11.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ತನ್ನ ಗೆಲುವಿನ ನಂತರ 22 ವರ್ಷದ ಹಿಮಾ ಮಾತನಾಡಿ, “ಸುಮಾರು ಎರಡು ವರ್ಷಗಳ ಗಾಯ ಮತ್ತು ಕಠಿಣ ಪರಿಶ್ರಮದ ನಂತರ ಮತ್ತೊಮ್ಮೆ ಮೈದಾನಕ್ಕೆ ಬಂದಿರುವುದು ಸಂತಸವಾಗ್ತಿದೆ ಎಂದು ಹೇಳಿದ್ದಾರೆ.