ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲೀಸ್ಟ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.! - BC Suddi
ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲೀಸ್ಟ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!

ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲೀಸ್ಟ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!

ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ರಾಜ್ಯದಲ್ಲೂ ಕೊರೋನಾ ನಿಯಂತ್ರಣಕ್ಕಾಗಿ ನೈಟ್ ಅಂಡ್ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ರೈಲ್ವೆ ಇಲಾಖೆ ಕೂಡ ಕೊರೋನಾ ನಿಯಂತ್ರಣಕ್ಕೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲೀಸ್ಟ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ರೈಲು ಹತ್ತೋದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯ ಬೆಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತರ್ ರಾಜ್ಯ ರೈಲುಗಳ ವೇಟಿಂಗ್ ಲಿಸ್ಟ ಟಿಕೇಟ ಹೊಂದಿರುವ ಪ್ರಯಾಣಿಕರು ರೈಲು ಹತ್ತುವುದನ್ನು ನಿರ್ಭಂದಿಸಿರುವ ಕಾರಣ, ರೈಲ್ವೆ ನಿಲ್ದಾಣಗಳಿಗೆ ಆಗಮಿಸದಿರಲು ಕೋರಲಾಗಿದೆ. ರೈಲಿನ ನಿಗದಿತ ನಿರ್ಗಮನದ 30 ನಿಮಿಷ ಮುಂಚಿತವಾಗಿ ಟಿಕೇಟ ರದ್ದುಗೊಳಸಿ ಹಣ ಮರುಪಾವತಿಯನ್ನು ಪಡೆಯಬಹುದು ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರೈಲುಗಳ ವೇಟಿಂಗ್ ಲಿಸ್ಟ ಟಿಕೇಟ ಹೊಂದಿರುವ ಪ್ರಯಾಣಿಕರು ರೈಲು ಹತ್ತುವುದನ್ನು ನಿರ್ಭಂದಿದ್ದಾರೆ.