ಸಂಗೀತ ಪ್ರತಿಯೊಬ್ಬರಿಗೂ ಎಲ್ಲಾ ಎಲ್ಲೆಗಳನ್ನು ಮೀರಿ ಮನಸ್ಸಿಗೆ ಮಾಧುರ್‍ಯಗಳನ್ನು ತಂದುಕೊಡುವಂಥದು. ತನ್ನ ಮಧುರ ಕಂಠದ ಇಂಪನು ಉಣಿಸಿ ಮನಸ್ಸಿಗೆ ಮುದ ನೀಡುವ ಕಂಠಸಿರಿ ಹೊಂದಿರುವ ಗಾನಕೋಗಿಲೆ ಶ್ರೀಮತಿ ಜ್ಯೋತಿ ರವಿಪ್ರಕಾಶ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ಸಂಗೀತ ಸಂಯೋಜಕಿ.

ಐದು ವರ್ಷದವಳಿದ್ದಾಗಲೇ ಸಂಗೀತಾಭ್ಯಾಸ ನಿರತರಾದ ಜ್ಯೋತಿ ಅವರು ಸಂಗೀತ ಸರಸ್ವತಿಯನ್ನು ಒಲಿಸಿಕೊಂಡಿದ್ದು ತನ್ನ ಅವಿರತ ಪರಿಶ್ರಮದಿಂದಲೇ ತಂದೆ ವಿದ್ವಾನ್ ಐ. ಪ್ರಾಣೇಶ್‌ರಾವ್ ಖ್ಯಾತ ಹಾರ್‍ಮೋನಿಯಂ ವಾದಕರು ತಾಯಿ ಸುನಂದಮ್ಮನವರು ಸಂಗೀತ ಶಿಕ್ಷಕರು. ಮನೆಯ ವಾತಾವರಣ ಸಂಗೀತ ಸುಧೆಯಿಂದ ತುಂಬಿ ತುಳುಕುತ್ತಿತ್ತು. ಇವರು ಸಂಗೀತ ದಿಗ್ಗಜೆ ಶ್ರೀಮತಿ ಮಂಜುಳ ಗುರುರಾಜ್ ಅವರ ಬಳಿ ಹತ್ತು ವರ್ಷಗಳ ಕಾಲ ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ.
ಬೆಂಗಳೂರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆಯೂ ಆಗಿರುವ ಇವರು ಅನೇಕ ಭಾವಗೀತೆ ಹಾಗೂ ಚಲನಚಿತ್ರಗೀತೆಗಳ ಧ್ವನಿ ಸುರುಳಿಗಳು ಬಿಡುಗಡೆಯಾಗಿವೆ. ಹಂಪಿ ಉತ್ಸವ, ಕದಂಬೋತ್ಸವ, ಚಾಲುಕ್ಯ ಉತ್ಸವ, ಮೈಸೂರು ದಸರ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಸುಗಮ ಸಂಗೀತ ಸಮ್ಮೇಳನ ಇತ್ಯಾದಿಗಳಲ್ಲಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕದ ರೈತಗೀತೆ, ನೇಗಿಲಯೋಗಿ ಯಲ್ಲಿ ಗಾಯಕ ಅಶ್ವತ್‌ರೊಟ್ಟಿಗೆ ಧ್ವನಿಗೂಡಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಅತಿಹೆಚ್ಚಿನ ಮಧುರ, ಮಧುರವೀ ಮಂಜುಳಗಾನ ಕಾರ್ಯಕ್ರಮದ ಕೇಂದ್ರ ಬಿಂದು ಚುಂಬಕ ಕಂಠದ ಜ್ಯೋತಿ ರವಿಪ್ರಕಾಶ್ ಅನ್ನುವುದು ಒಂದು ಹೆಮ್ಮೆ.
ಸೂರ್ಯವಂಶ ಚಿತ್ರದ ಮೂಲಕ ಹಿನ್ನಲೆ ಗಾಯಕಿಯಾಗಿ ಪಾದಾರ್ಪಣೆ ನಂತರ ಅನೇಕಾನೇಕ ಚಿತ್ರಗಳಿಗೆ ಹಾಡಿದ್ದಾರೆ. ತಮ್ಮದೇ ಆದ ಗಾನಪ್ರಿಯ ಸಂಸ್ಥೆಯಿಂದ ದುರ್ಗದ ಸೊಬಗು, ಭಕ್ತಿಸೌರಭ, ಭಕ್ತಿ ಸಮರ್ಪಣೆ ಮುಂತಾದ ಭಕ್ತಿಗೀತೆಗಳು ಇತ್ತೀಚಿನ ಸಂಗೀತ ನಿರ್ದೇಶಕರಾದ ಮೃತ್ಯುಂಜಯ ದೊಡ್ಡವಾಡ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎಲ್ಲಾ ಭಾವಗೀತೆಗಳು ಧ್ವನಿಸುರುಳಿಗಳಲ್ಲಿ ಇವರ ಗಾಯನದ ಧ್ವನಿಯಿದೆ. ಈಟಿವಿಯ ಎದೆತುಂಬಿ ಹಾಡಿದೆನು ಕಾರ್ಯಕ್ರಮದ ಮೂಲಕ ಡಾ|| ಎಸ್.ಪಿ. ಬಾಲಸುಬ್ರಹ್ಮಣ್ಯಂ, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಡಾ|| ಮನ್ನಡೆಹರಿಹರನ್, ಸಿ. ಅಶ್ವತ್ ಜೊತೆ ಹಾಡಿರುವ ಇವರು ಶ್ರೀಮತಿ ವಾಣಿಜಯರಾಂ, ಎಸ್. ಜಾನಕಿ ಅವರ ಜೊತೆ ವೇದಿಕೆಯನ್ನು ಹಂಚಿಕೊಂಡಿರುವ ಭಾಗ್ಯವಂತರು. ಉದಯ ವಾಹಿನಿಯ ಕುಹೂ ಕುಹೂ ಕಾರ್ಯಕ್ರಮದಲ್ಲಿ ಇವರು ಮುಖ್ಯ ಗಾಯಕಿ ಹಾಗೂ ಇದೇ ಸಂಸ್ಥೆಯಿಂದ ಕರ್ನಾಟಕದಾದ್ಯಂತ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಪ್ರಮುಖ ತೀರ್ಪ್ಮಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂತಹ ಅಪರೂಪದ ಗಾಯಕಿ ತಮ್ಮದೇ ಆದ ಗಾನಪ್ರಿಯ ಕಲ್ಚರಲ್ ಅಕಾಡೆಮಿ ಸಂಸ್ಥೆಯನ್ನು ಸ್ಥಾಪಿಸಿ ತನ್ನೊಂದಿಗೆ ಹತ್ತಾರು ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ, ಪೋಷಿಸುವ ಮೂಲಕ ಅನೇಕಾನೇಕ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮಹತ್ತರ ಕನಸು ಹೊತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಗಾನಕೋಗಿಲೆ ಬಿರುದನ್ನಿಟ್ಟು ಗೌರವಿಸಿದೆ. ಇತ್ತೀಚೆಗೆ ಇವರದೇ ದನಿಯಲ್ಲಿ ಹಾಡು ಹಳೆಯದಾದರೇನು ಶೀರ್ಷಿಕೆಯಿರುವ ಹಳೆಯ ಮಧುರ ಚಿತ್ರಗೀತೆಗಳ ಒP೩ ಬಿಡುಗಡೆಯಾಗಿದೆ. ಇಂತಹ ಅಪರೂಪದ ಪ್ರತಿಭೆಯೊಂದಿಗೆ ಒಂದು ಸಂಜೆ.
ಜ್ಯೋತಿ ನಿಮಗೆ ಸಂಗೀತದ ಒಲವು ಯಾವ ವಯಸ್ಸಿನಲ್ಲಿ ಮೂಡಿತು.?
ಸಂಗೀತದ ಒಲವು ನಾನು ಐದು ವರ್ಷದವಳಿರುವಾಗಲೇ ಶುರುವಾಗಿದ್ದು ಮನೆಯಲ್ಲಿ ಸಂಗೀತದ ವಾತಾವರಣ ಇದ್ದುದ್ದರಿಂದ ನನಗೇನು ಕಷ್ಟ ಅನ್ನಿಸಲಿಲ್ಲ. ಅಪ್ಪ-ಅಮ್ಮರ ಮಾರ್ಗದರ್ಶನದಲ್ಲಿಯೇ ಶುರುವಾಯಿತು. ಅಮ್ಮ ಹೇಳುತ್ತಿದ್ದರು ನಾನು ಚಿಕ್ಕವಳಿದ್ದಾಗ ಏನೋ ರಾಗವಾಗಿಯೇ ಅಳುತ್ತಿದ್ದೆಯಂತೆ. ಅಪ್ಪ ಆಗಲೇ ನನಗೆ ವೇದಿಕೆಗಳಿಗೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಸಂಗೀತ ಅನ್ನುವುದು ನನಗೆ ರಕ್ತಗತವಾಗಿ ಒಲಿದಿರುವ ಕಲೆ. ಅಪ್ಪ-ಅಜ್ಜ ಎಲ್ಲರೂ ಹಾರ್‍ಮೋನಿಯಂ ವಿದ್ವಾಂಸರೇ ನಮ್ಮ ತಂದೆ ೬-೭ ವಾದ್ಯಗಳನ್ನು ನುಡಿಸುತ್ತಿದ್ದರು, ವಾದ್ಯಗಳನ್ನು ಸಿದ್ದಪಡಿಸುತ್ತಿದ್ದರು, ಹಳೆಯ ಚಲನಚಿತ್ರ ಹಂಸಗೀತೆಯಲ್ಲಿ ನಮ್ಮ ಮನೆಯ ಎಲ್ಲಾ ವಾದ್ಯಾಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದತಂತೆ ಸಿನಿಮಾದ ಮೊದಲ ಹಾಡು ಹಿಮಾದ್ರಿಸುತೆ ಪಾಯಿಮಾಂ ನಲ್ಲಿರುವ ಎಲ್ಲಾ ವಾದ್ಯಗಳು ತಂಬೂರಿ, ವೀಣೆಗಯನ್ನು ಸ್ವತಃ ಶಂಕರ್‌ನಾಣ್ ಮತ್ತು ಅನಂತ್‌ನಾಗ್ ತೆಗೆದುಕೊಂಡು ಹೋಗುತ್ತಿದ್ದರು.

ಸಂಗೀತದಲ್ಲಿ ಆಸಕ್ತಿ ಮೂಡಲು ನಿಮಗೆ ಪ್ರೇರಣೆ ಯಾರು ಹಾಗೂ ನಿಮ್ಮ ಮೊದಲ ಗುರು ಯಾರು..?
ಸಂಗೀತದಲ್ಲಿ ಆಸಕ್ತಿ ಮೂಡಿದ್ದು ಮನೆಯ ವಾತಾವರಣದಿಂದಲೇ ಮೊದಲ ಪ್ರೇರಣೆ ಸಿಕ್ಕಿದ್ದು. ನನ್ನ ತಂದೆ ತಾಯಿಯಿಂದ ನಂತರ ನನ್ನ ಮೊದಲ ಗುರು ಅಂದರೆ ಎಚ್. ವೆಂಕಟ್‌ರಾಮ್ ಅವರೇ ನನಗೆ ಕರ್ನಾಟಕ ಶಾಸ್ತ್ರಿಯ ಸಂಗೀತ ಹೇಳಿಕೊಟ್ಟಂತಹ ಗುರುಗಳು.
ಜೀವನ ಮತ್ತು ಸಂಗೀತವನ್ನು ನೀವು ಹೇಗೆ ಸಮೀಕರಿಸುವಿರಿ..?
ನನಗೇನಿದು ಕಷ್ಟ ಅನಿಸುವುದಿಲ್ಲ ಮನೆಯಲ್ಲಿ ನನ್ನ ಪತಿಯ ಪ್ರೋತ್ಸಾಹ ತುಂಬಾ ಇದೆ. ಅವರ ಸಹಕಾರದಿಂದಲೇ ನಾನು ಇಷ್ಟೊಂದು ಈ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಗಿದ್ದು. ಸಾಧಕರಿಗೆ ಮನೆಯ ವಾತಾವರಣ ಪೂರಕವಾಗಿರಬೇಕೆನ್ನುತ್ತಾರೆ. ಅದು ನನಗೆ ನನ್ನ ಅತ್ತೆ ಮನೆಯಲ್ಲಿಯೂ ದೊರಕಿತು. ನಮ್ಮದು Joint Family ನನ್ನ ಅತ್ತೆಯವರೇ ನನ್ನನ್ನು ಮೊಟ್ಟಮೊದಲಿಗೆ ಮಂಜುಳ ಗುರುರಾಜ್ ಅವರ ಬಳಿ ಹಿನ್ನಲೆ ಗಾಯನ ಕ್ಲಾಸ್‌ಗೆ ಕರೆದುಕೊಂಡು ಹೋಗಿ ಬರುತ್ತಿದ್ದರು. ನನ್ನ ಯಜಮಾನರು ರವಿಪ್ರಕಾಶ್‌ರವರು ಬೆಂಗಳೂರಿನ Multi National Company ಯೊಂದರಲ್ಲಿ ಂಜiಣoಡಿ ಆಗಿದ್ದಾರೆ. ಅವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ. ನನ್ನ ಪತಿ Weekends ನನ್ನ ಜೊತೆ Spendಮಾಡುತ್ತಾರೆ. ಹೀಗೆ ಯಜಮಾನರ ಪ್ರೋತ್ಸಾಹ ಅತ್ತೆಯ ಸಹಕಾರ ಇರುವುದರಿಂದ ಕಷ್ಟ ಅನ್ನಿಸುವುದಿಲ್ಲ.
ಸಂಗೀತ ಕ್ಷೇತ್ರದಲ್ಲಿ ನಿಮ್ಮ ಮೇಲೆ ಅತಿಯಾದ ಪ್ರಭಾವ ಬೀರಿದ ವ್ಯಕ್ತಿ ಯಾರು..?
ಮೊದಲು ತಂದೆ-ತಾಯಿ ನನ್ನ ಗುರುಗಳು. ನಚಿತರದ ಪಯಣದಲ್ಲಿ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಎಸ್. ಜಾನಕಿಯವರು ಅವರ ಹಾಡುಗಳನ್ನು ಕೇಳುತ್ತಾ ಬೆಳೆದವಳು ನಾನು. ಅವರಂತೆ ಹಾಡಬೇಕೆನ್ನುವ ಕನಸು ಕಟ್ಟಿ ನಡೆದವಳು. ನಂತರ ಗುಲಾಮ್ ಅಲಿಯವರ ಗಜಲ್‌ಗಳು, ಆಶಾಜೀಯವರು ನನಗೆ ಪ್ರಭಾವ ಬೀರಿದ ವ್ಯಕ್ತಿಗಳು.
 ನೀವು ಗಾಯಕಿ ಯಾಗದೆ ಇದ್ದರೆ ಬೇರೆ ಯಾವ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದಿರಿ..?
ಭರತನಾಟ್ಯ ಕಲಾವಿದೆಯಾಗುತ್ತಿದ್ದೆ. ನೃತ್ಯ ನನಗೆ ತುಂಬಾ ಇಷ್ಟವಾಗುವಂತಹ ಕಲೆ. ದಾವಣಗೆರೆಯ ರಾಮಕೃಷ್ಣಭಟ್ ಅವರಲ್ಲಿ ನೃತ್ಯ ಕಲಿತು ಅರ್‍ಯಂಗೆಟ್ರಂ ಕೂಡ ಆಗಿತ್ತು. ಆದರೆ ನಾನು ಸಂಗೀತದಲ್ಲಿ ಮುಂದುವರೆದೆ.
ಚಿತ್ರದುರ್ಗ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಅಭಿಮಾನ, ಪ್ರೀತಿಯನ್ನ ಹೇಗೆ ಅಭಿವ್ಯಕ್ತಿಪಡಿಸಲು ಬಯಸುವಿರಿ..?
ಅದನ್ನು ಅಭಿವ್ಯಕ್ತಪಡಿಸಲು ಖಂಡಿತ ಶಬ್ದಗಳಲ್ಲಿ ಸಾಧ್ಯವಿಲ್ಲ. ಇವತ್ತು ನಾನು ಜ್ಯೋತಿರವಿಪ್ರಕಾಶ್ ಏನು ಬೆಳದು ನಿಂತಿದ್ದೆನೋ ಇದು ಇನ್ನೂ ಏನು ಅಲ್ಲ ಇನ್ನೂ ತುಂಬಾ ಸಾಧನೆ ಮಾಡುವುದು ಇದೆ. ನಾನು ಏನೇ ಮಾಡಿದ್ರು ಎಷ್ಟೇ ಬೆಳೆದರೂ ನಾನು ನನ್ನ ದುರ್ಗದ ಮಣ್ಣನ್ನು ಎಂದೂ ಮರೆಯುವುದಿಲ್ಲ. ಈ ಕ್ಷಣಕ್ಕೂ ನನ್ನ ಉಸಿರುವ ದುರ್ಗನೇ.
ಹಿಂದಿ ಚಲನಚಿತ್ರದ ಸುಪ್ರಸಿದ್ಧ ಹಿನ್ನಲೆ ಗಾಯಕಿ ಆಶಾಬೋಂಸ್ಲೆ ಅವರ ಆಶಾ-ನಶಾ’ ಶೋ ತುಂಬಾ ಪ್ರಸಿದ್ದಿನ್ನು ಪಡೆದಿದೆ. ಈ ತರಹದ ಶೋ ಆಶಾ-ನಶಾ ನನ್ನ ಹುಟ್ಟೂರಾದ ಚಿತ್ರದುರ್ಗದಲ್ಲಿ ಮಾಡಬೇಕು ಅನ್ನುವ ಮಹದಾಸೆ ಇದೆ. ಮತ್ತು ಮಾಡೆ ಮಾಡುತ್ತೇನೆ.
ನಿಮ್ಮ ಹಟ್ಟೂರಿಗೆ  ನಿಮ್ಮ ಕೊಡುಗೆ ಏನು.?
ನನ್ನೂರಿನಲ್ಲಿ ನಾನು ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಮಾಡಬೇಕು ಇಲ್ಲಿನ ಜನಕ್ಕೆ ತುಂಬಾ Entertainment ಕೊಡಬೇಕು. ಸಂಬಂಧಪಟ್ಟ ಗ್ರಾಮದೇವತೆಗಳ ಸಿ.ಡಿ. ಹಾಗೂ ಚಿತ್ರೀಕರಣ ಮಾಡಬೇಕು. ಚಿತ್ರದುರ್ಗದಲ್ಲಿ ಒಳ್ಳೊಳ್ಳೆ ಶೋ ಮಾಡಬೇಕು ಅನ್ನೋ ಕನಸಿದೆ.
ನಿಮ್ಮ ಮುಂದಿನ ಯೋಜನೆಗಳೇನು..?
ತುಂಬಾ ಯೋಜನೆಗಳಿಗೆ ಮಾಡಬೇಕು ದೊಡ್ಡ ದೊಡ್ಡ ಈವೆಂಟ್ಸ್ ಮಾಡಬೇಕು. ಭಗವತ್ ಗೀತೆಯನ್ನು ಕನ್ನಡದಲ್ಲಿ ಅನುವಾದ ಮಾಡಿ ಹಾಡಬೇಕು. ರಾಗಗಳ ಮೂಲಕ ಅಭಿವ್ಯಕ್ತಿಪಡಿಸಬೇಕು. ಬರೆಯುವ ಮಹದಾಸೆಯೂ ಇದೆ. ಶಿಬಿರಗಳನ್ನು ಆಯೋಜಿಸಿ ಸರಕಾರಿ ಶಾಲೆ ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿ, ಸಂಗೀತದ ಬಗ್ಗೆ ಅರಿವು ಮೂಡಿಸಿ, ನಾಡಗೀತೆ, ಸುಗಮ ಸಂಗೀತ, ಹಿನ್ನೆಲೆ ಗಾಯನ ಇವೆಲ್ಲವುಗಳ ಬಗ್ಗೆ ತಿಳಿಸಿಕೊಡಬೇಕು ಅನ್ನುವ ಯೋಜನೆ ಇದೆ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಗಳು ತುಂಬಾ ಇರುತ್ತವೆ. ಆದರೆ ಅವರಿಗೆ ಅವಕಾಶಗಳು ಕಡಿಮೆ ಇರುತ್ತವೆ. ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಬೇಕು. ಅವಕಾಶ ವೇದಿಕೆಯನ್ನು ಒದಗಿಸಿ ತರಬೇತಿ ಕೊಡುವ ಆಸೆ ಇದೆ.
ನೀವು ತುಂಬಾ ಇಷ್ಟ ಪಟ್ಟು ಹಾಡುವ ರಾಗ ಯಾವುದು..?
ನನ್ನ ಇಷ್ಟವಾದ ರಾಗ ಮೋಹನರಾಗ ಹಿಂದೂಸ್ತಾನಿ ಸಂಗೀತದಲ್ಲಿ ಇದಕ್ಕೆ ಭೂಪ್ ಎನ್ನುತ್ತಾರೆ. ಈ ರಾಗವನ್ನು ಮಧ್ಯಾನಹ ಸಮಯದಲ್ಲಿ ಗೂಧೂಳಿ ಸಮಯದಲ್ಲಿ ಹಾಡುತ್ತಾರೆ. ಈ ರಾಗ ನನಗೆ ತುಂಬಾ ಖುಷಿ ಕೊಡುತ್ತದೆ. ಆ ತರಂಗಗಳು ನನ್ನ ಮನಸ್ಸಿಗೆ ಉಲ್ಲಾಸದಿಂದಿರಿಸುತ್ತವೆ. ಇದರ ಜೊತೆ ಕೀರವಾಣಿ ರಾಗವು ಮನಮುಟ್ಟುವ ಮನಸ್ಸಿಗೆ ತಟ್ಟುವ ರಾಗ. ಉದಾಹರಣೆ ಈ ಹಸಿರು ಸಿರಿಯಲಿ ಮನಸ್ಸು ಮಿಡಿಯಲಿ ನವಿಲೇ [ಮೋಹನರಾಗ]
 ಹಿನ್ನಲೆ ಗಾಯನ ಅಥವಾ ಸ್ಟೇಜ್ ಶೋ ಇವರೆಡರಲ್ಲಿ ನಿಮಗೆ ಯಾವುದು ಹೆಚ್ಚು ಖುಷಿ ಕೊಡುತ್ತದೆ..? ಹಾಗೂ ಚಿತ್ರರಂಗದಲ್ಲಿ ಹಾಡಲಿಕ್ಕೆ ಶುರು ಮಾಡಿದ್ದು ಹೇಗೆ..?
ಮೊದಲು ನಾನು ಹಿನ್ನಲೆ ಗಾಯಕಿ ನಂತರ ಸ್ಟೇಜ್ ಶೋ ಮಾಡಿದ್ದು ಹಿನ್ನಲೆ ಗಾಯನದಲ್ಲಿ ನನಗೆ ತುಂಬಾ ಖುಷಿ ಇದೆ. ಮೊಟ್ಟ ಮೊದಲು ವಿ. ಮನೋಹರ್‌ರವರು ಸೂರ್ಯವಂಶ ಚಿತ್ರದ ಸೇವಂತಿಯೇ ಹಾಡನ್ನು ಎಸ್.ಪಿ.ಬಿ. ಅವರ ಜೊತೆ ನಾನು ವೆರಿ ಫಸ್ಟ್ ಸಾಂಗ್ ಹಾಡಿದ್ದು ಸೂರ್ಯನಿಗೆ ಸೂರ್ಯನೇ ಸಮಾನ. ನಂತರ ಅನೇಕ ಚಿತ್ರಗಳಿಗೆ ಹಾಡಿದೆ. ಕೃಷ್ಣಾರ್ಜುನ, ಕೌರವ ಇತ್ಯಾದಿ. ಆದರೆ ಆ ಮೊದಲ ಸಲ ಅವರೊಂದಿಗೆ ಹಾಡಿದ್ದು ಅವಿಸ್ಮರಣೀಯ. ಈಗ ಮಂಜುಳ ಗುರುರಾಜ್ ಅವರ ಮಗನ ಜೊತೆ First time Rocking song ಹಾಡುತ್ತಿದ್ದೇನೆ ಚಿತ್ರದ ಹೆಸರು First time Rocking song Entertainment No Exit [ Horror movie] ಇದರ ಧ್ವನಿಸುರುಳಿಯನ್ನು ಲಹರಿ ಅವರು ಲಾಂಚ್ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ನನಗೆ Exposure ಕೊಟ್ಟಿದ್ದು ಮಧುರ ಮಧರವೀ ಮಂಜುಳಗಾನ.
 ಈ ಪಯಣದಲ್ಲಿ ನಿಮ್ಮ ಅವಿಸ್ಮರಣೀಯ ಕ್ಷಣಗಳು..? ಹಾಗೂ ಈ ಹಂತದಲ್ಲಿ ನಿಂತು ನೀವು ಯಾರನ್ನು ಧನ್ಯತಾಭಾವದಿಂದ ಸ್ಮರಿಸುತ್ತೀರಾ?॒
ಮೊಟ್ಟ ಮೊದಲು ಚಿತ್ರದುರ್ಗದಲ್ಲಿ ಮಾರುತಿ ಮೋಹನ್‌ರವರು ೨೦೧೨ರಲ್ಲಿ Latha Mangeshkar ರವರ ಶೋ ಮಾಡಿದ್ದರು. ಅಲ್ಲಿಂದ ನನ್ನ ಮತ್ತು ದುರ್ಗದ ನಡುವಿನ ಬಾಂಧವ್ಯ ಇನ್ನೂ ಹಸಿರಾಗುತ್ತಾ ಹೋಯಿತು. ನಂತರ ಜಯಂತಿಯವರೊಟ್ಟಿಗೆ ದುರ್ಗದಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೀಗೆ ದುರ್ಗ ಅಂದ ಕ್ಷಣ ನನ್ನ ಸ್ನೇಹಿತರನ್ನು ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಉಮೇಶ್, ರಘುರಾಮರೆಡ್ಡಿ, ಪರಮೇಶ್, ಎಂ.ಡಿ. ಸುರೇಶ್, ನಾಗರಾಜ್, ರೋಟರಿ ರವೀಂದ್ರ, ಸಹೋದರ ಶಿವಪ್ರಕಾಶ್ ಇವರ ಅಪಾರ ಅಭಿಮಾನಕ್ಕೆ, ಸ್ನೇಹಕ್ಕೆ ನನ್ನ ಮನಪೂರ್ವಕ ಧನ್ಯತಾಭಾವ ಇದ್ದೇ ಇದೆ.

ನೀವು ಎದುರಿಸಿರುವ ಸವಾಲುಗಳು..?
ಬೇಕಾದಷ್ಟಿವೆ ನಾವು ಹಾಡುವ ಹಾಡುಗಳನ್ನು ಬೇರೆಯವರಿಗೆ ಕೊಟ್ಟಿದ್ದು ಇದೆ, ಗಂಟೆ ಗಟ್ಟಲೇ ಕಾದು ಒಂದೊಂದು ಲೈನ್ ಹಾಡಿದ್ದು ಇದೆ. ರಾತ್ರಿಯೆಲ್ಲ ಕಾದಿದ್ದು ಕೇವಲ ಒಂದೇ ಸಾಲು ಹಾಡಿದ್ದು ಇದೆ. ಇವೆಲ್ಲದರ ನಡುವೆ ಸಂತೋಷನೂ ಕಂಡುಕೊಂಡಿದ್ದೇನೆ.

-ಶ್ರೀಮತಿ ಚಾಂದಿನಿ ಖಲೀದ್