ಸಂಕ್ರಾತಿ ಹಬ್ಬವನ್ನು ಹಳ್ಳಿಗಳಲ್ಲಿ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಪೈಕಿ, ಭಾರತದಲ್ಲಿ ಮಕರ ಸಂಕ್ರಾಂತಿ   ಹೆಸರಲ್ಲಿ ಪ್ರತಿ ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಾರೆ. 

ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಾನಾ ಕಡೆ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಸಂಕ್ರಾಂತಿಯೆಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಪಂಜಾಬ್‌ನಲ್ಲಿ ಲೊಹ್ರಿ ಎಂದೂ, ಗುಜರಾತ್‌ನಲ್ಲಿ ಉತ್ತರಾಯಣ, ಅಸ್ಸಾಂನಲ್ಲಿ ಭೋಗಾಲಿ ಬಿಹು, ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಕ್ರಾಂತಿಯೆಂದೂ ಕರೆಯಲಾಗುತ್ತದೆ.

ಕ್ಯಾಲೆಂಡರ್ ದಿನಚರಿ ಪ್ರಕಾರ ಹೊಸ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುವ ಮೊದಲ ದಿನವನ್ನೇ ಸಂಕ್ರಾಂತಿಯನ್ನಾಗಿ ಆಚರಿಸಲಾಗುತ್ತದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವುದು ಸಂಕ್ರಾಂತಿ ದಿನದ ವಿಶೇಷ. ಅಲ್ಲದೆ, ಈ ದಿನದಿಂದ ಹಗಲು ಹೆಚ್ಚು, ರಾತ್ರಿ ಕಡಿಮೆಯಾಗುತ್ತದೆ. ಇದು ಉತ್ತರಾಯಣ ಪುಣ್ಯಕಾಲದ ಅರಂಭವೂ ಸಹ ಔದು. 

ರಾಜ್ಯದಲ್ಲಿ ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚುವುದು ವಿಶೇಷ. ಎಳ್ಳು ಬೆಲ್ಲ ಹಂಚಿ ಒಳ್ಳೊಳ್ಳೆ ಮಾತನಾಡಿ ಎಂಬುದು ಸಂಕೇತವಾಗಿರ ಬಹುದು.