ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗ ತಜ್ಞೆ. ೩೩ ಚಿನ್ನದ ಪದಕಗಳನ್ನು ಪಡೆದು ಚಿನ್ನದರಾಣಿ ಎಂದು ಖ್ಯಾತರಾದವರು. ದೇಶದ ಪ್ರತಿಷ್ಠಿತ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಪಡೆದವರು ಆದ ಡಾ|| ಡಾ|| ವಿಜಯಲಕ್ಷ್ಮೀ ಬಾಳೆ ಕುಂದ್ರಿಯವರನ್ನು ಇಂದು ವೈದ್ಯರ ದಿನಾಚರಣೆ ಅಂಗವಾಗಿ ಶ್ರೀಮತಿ ರೀನಾ ವೀರಭದ್ರಪ್ಪ ಅವರು ನಡೆಸಿದ ಸಂದರ್ಶನ ವನಿತಾ ಕಾಲಂನಲ್ಲಿ.॒.
–    ಸಂ

೧೯೫೦ ರಲ್ಲಿಈಶ್ವರಪ್ಪ ಗುರುಸಿದ್ದಪ್ಪ, ಸಿದ್ದಮ್ಮನವರ ಕೃಷಿಕ ಕುಟುಂಬದದ ಮುದ್ದಿನ ರತ್ನವಾಣಿ ಹುಟ್ಟಿದ ಡಾ|| ವಿಜಯಕ್ಷ್ಮೀ ಬಾಳೆ ಕುಂದ್ರಿಯವರು ಚಿಕ್ಕಂದಿನಲ್ಲೇ “ಬಹುಮುಖ ಪ್ರತಿಭೆ” ಯಅತ್ಯುತ್ತಮ ಎಂಬ ವಿದ್ಯಾರ್ಥಿನಿ ಎಂಬ ಪಾರಿತೋಷಕ ಪಡೆದು ೧೯೬೮ ರಲ್ಲಿಕರ್ನಾಟಕದ ಮೆಡಿಕಲ್ಸ್‌ಕಾಲೇಜು ಹುಬ್ಬಳ್ಳಿಯಲ್ಲಿ ಸೇರ್ಪಡೆಗೊಂಡರು, ೧೯೭೭ ರಲ್ಲಿಎಂ.ಡಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ (ಬೆಂಗಳೂರುನಲ್ಲಿ) , ಡಾ|| ಷಡಾಕ್ಷರಪ್ಪಚಿನ್ನದ ಪದಕ ಪಡೆದರು.
ರೀನಾ: ವೈದ್ಯಕೀಯಕ್ಷೇತ್ರವನ್ನು ನೀವು ಏಕೆ ಆಯ್ಕೆ ಮಾಡಿಕೊಂಡಿರಿ?
ಡಾ|| ವಿ: ಭಾರತದಲ್ಲಿ ಅದರಲ್ಲೂ  ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುವ ಕೃಷಿಕ ಕುಟುಂಬಗಳು ಜಾಸ್ತಿ ಹಳ್ಳಿಗಳ್ಳಲ್ಲಿ ಹೆಚ್ಚಾಗಿ ನೀರಿನಿಂದ ಹಿಡಿದು ಎಲ್ಲಾ ಆಹಾರವು ಕಲುಷಿತ ಮತ್ತು ರಾಸಾಯನಿಕ ಒಳಗೊಂಡ ಆಹಾರವಾಗಿರುತ್ತದೆ. ಉತ್ತಮ ದೇಶಕಟ್ಟಲು ಆರೋಗ್ಯವೇ ತಳಹದಿ. ಆರೋಗ್ಯವಂತ ನಾಗರೀಕ ಸಮಾಜಕಟ್ಟಲು  ನಾನು ಈ ವೈದ್ಯಕೀಯಕ್ಷೇತ್ರವನ್ನುಆಯ್ಕೆ ಮಾಡಿಕೊಂಡೆ.
ರೀನಾ: ಇಷ್ಟೇಲ್ಲಾ ಸಾಧನೆ ಮಾಡಿದ ನೀವು ಆನೇಕ ಅವಕಾಶಗಳು ದೊರೆತರು ವಿದೇಶಕ್ಕೆ ತೆರಳದೆ ಭಾರತದಲ್ಲೆ ನೆಸಲು ಕಾರಣವೇನು?
ಡಾ|| ವಿ: ಸಾಧನೆಗಳಿಗೆ  ಕೊನೆ ಇಲ್ಲ್ ಅದರೆ, ಮಾಡಿದ ಸಾಧನೆ ಉಪಯುಕ್ತ ವಾದಲ್ಲಿ ಮಾತ್ರ ಅದಕ್ಕೆ ಬೆಲೆ ಸಿಗುವುದು. ಬಡವರ ಬದುಕು ಬಂಗಾರವಾದರೆ, ನನ್ನ ಬದುಕು ಸಾರ್ಥಕವಾದಂತೆ. ಎಂದು ತಿಳಿದವಳು ನಾನು. ಕಾರಣ ನನ್ನ ತಂದೆ ನನಗೆ “ ಮಗ ಎಷ್ಟೇ ಓದಿ  ಎಷ್ಟೇ ಸಾಧನೆ ಮಾಡಿ ನೀನು ವಿದೇಶದಲ್ಲಿ ನೆಸಿದರೆ ನಮ್ಮ ನಾಡು ನಮ್ಮ ಜನಕ್ಕೆ ನೀನು ಮೋಸ ಮಾಡಿದ ಹಾಗೆ ಆದ್ದರಿಂದ ನೀನು ನಿನ್ನ ವಿದ್ಯೆಯನ್ನು ನಮ್ಮ ಭಾರತ ಅದರಲ್ಲೂ ಉತ್ತರಕರ್ನಾಟಕ ಕೆ ಹಳ್ಳಿಗಳಲ್ಲಿ ಸೇವೆ ಮಾಡಿ ನಿನ್ನ ಜೀವನ ಸಾರ್ಥಕ ಮಾಡಿಕೊ” ಎಂದು ಹೇಳಿದ್ದರು. ಅಂದಿನಿಂದ ಇಂದಿನವರೆಗೂ ನಾನು ಹಳ್ಳಿಗಳಿಗೂ ಸಂಚರಿಸಿ ಮಾತೆಯರಿಗೆ ಮಕ್ಕಳಿಗೆ ವಿದ್ಯೆ, ಜ್ಞಾನ, ಆರೋಗ್ಯದ ಜ್ಞಾನದಾಸೋಹ ನೀಡುತ್ತಾ ಬಂದಿದ್ದೇನೆ. ಗಡಿ ನಾಡುಗಳಿಗೆ ಭೇಟಿಕೊಟ್ಟು ಅವರ ಸೇವೆ ಮಾಡುತ್ತೀರುವೆ.
ರೀನಾ: ಈ ವೃತ್ತಿ ನಿಮಗೆ ತೃಪ್ತಿತಂದಿದೇಯಾ?
ಡಾ|| ವಿ: ಖಂಡಿತವಾಗಿ…. ನೈತಿಕ ನೆಲೆ ಕಟ್ಟುಧರ್ಮ, ನಮ್ಮ ಸಂಸ್ಕೃತಿ, ಮೊದಲು ನಮಗೆ  ಭಾರತದ ಅಭ್ಯುದಯ ನಮ್ಮ ಕರ್ತವ್ಯ ನಾವು ಸಾಧನೆ ಮಾಡಿ ವಿದೇಶ ಸೇರಿದರೆ ತಾಯ್ನಡಿಗೆ ದ್ರೋಹ ಬಗೆದಂತೆ ಹಾಗಾಗಿ. ನಾನು ಇಲ್ಲೇ ನೆಲೆಸಿ ದೀನರ ಸೇವೆ ಮಾಡಿ ನನ್ನ ಕರ್ತವ್ಯವನ್ನು ನಿಷ್ಟೆಯಿಂದ ನಡೆಸುತ್ತಿರುವುದು ನನಗೆ ತೃಪ್ತಿತಂದಿದೆ.
ಅಳುವ ಕಂದಮ್ಮಗಳ ಹೆತ್ತ ತಾಯಂದಿರ ಕಣ್ಣೀರ ಒರೆಸಿ ನನ್ನ ಕೈಲಾದ ಸೇವೆಯನ್ನು ಕರ್ತವ್ಯದಲ್ಲಿ ಕಾಣುತ್ತಿದ್ದೇನೆ.

ರೀನಾ: ವೈದ್ಯಕೀಯಕ್ಷೇತ್ರದಲ್ಲಿ ಬೆಳೆದ ನೀಮಗೆ ಸಾಹಿತ್ಯ ಒಲಿದದ್ದು ಹೇಗೆ?
ಡಾ||ವಿ: ಡಾ|| ಸಿದ್ದಯ್ಯ ಪುರಾಣಿಕ್‌ರ ಮನೆಯ ಪಕ್ಕದಲ್ಲಿ ಇದ್ದ ನಾನು  ಅವರ ನೆರಳಲ್ಲಿ ಬೆಳೆದ ನನಗೆ ಅವರು ಸ್ಪೂರ್ತಿಯಾಗಿ ನಾನು ಕವಿಯಾದೆ. ಸಮಾಜಕ್ಕೆ ಹಿತವನ್ನು ನೀಡುವ ಸಾಹಿತಿಯಾದೆ.
ರೀನಾ: ಮಹಿಳೆಯರ ಬಗ್ಗೆ ನಿಮ್ಮ ಆಭಿಪ್ರಾಯ?
ಡಾ|| ವಿ: ಸ್ವಾಮಿ ವಿವೇಕಾನಂದರ ಪ್ರಕಾರ ಹಿಂದೆ ತಮ್ಮ ಪರಾಕ್ರಮದಿಂದ ಪುರುಷರು ಸಮಾಜದವನ್ನು ಕಟ್ಟುತ್ತಿದ್ದರು. ಆದರೆ ಮಹಿಳೆಯ ಮೋಹದಿಂದ ಇಡೀ ರೋಮನ್ ಸಾಮ್ರಾಜ್ಯವೇ ನಾಶವಾಯಿತು. ಮುಂದೆಯಾವುದೇ ಸಮಾಜವನ್ನು ಕಟ್ಟುವ ಕೆಸ ಮಹಿಳೆ ಮಾಡುತ್ತಾಳೆ ಮಹಿಳೆಯೇ ನಿಭಯಿಸುತ್ತಾಳೆ, ಮಹಿಳೆ ಸರ್ವ ಶಕ್ತಳು ಎಲ್ಲಾ ರಂಗದಲ್ಲಿ ತನ್ನನ್ನು ತೊಡಗಿಸಬಳು. ಆದ್ದರಿಂದ ಮಕ್ಕಳ ಷೋಷಣೆ ಮತ್ತು ಉತ್ತಮ ಪ್ರಜೆಗಳನ್ನು ಕೊಡುವುದು ಉತ್ತಮ ಮಹಿಳೆಯೇ….

ರೀನಾ: ಮಹಿಳೆಯ ಸಮಾನತೆಯನ್ನು ಕೆಳುತ್ತಿದ್ದಾಳೆ ಇದರ ಬಗ್ಗೆ ನೀಮ್ಮ ಅನಿಸಿಕೆ ತಿಳಿಸಿ?
ಡಾ|| ವಿ: ಸಮಾನತೆ ಅನ್ನುವುದು ಒಳ್ಳೆಯ ಕ್ಷೇತ್ರ ಅದರೆ ಅಲ್ಲಿ ನಾವು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅನ್ನುವುದರ ಮೇಲೆ ಅವಂಭಿತವಾಗಿದೆ ಅಷ್ಟೆ.
ಖಂಡಿತಾ ಒಪ್ಪುತ್ತೇನೆ. ವಿದ್ಯಾಬ್ಯಾಸಗಳಲ್ಲಿ 56% ಮೀಸಲಿನಿಂದ ಇಂದು 76% ವರೆಗೆ ಬಂದಿz ರಾಜಕೀಯದಿಂದಲೂ ಮಹಿಳೆಗೆ ಉತ್ತುಮ ಅವಕಾಶಗಳು ದೊರಕುತ್ತಿವೆ. ಉತ್ತಮ ಕೆಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಗುರಿತಿಸಿಕೊಳ್ಳುವುದು ಉತ್ತಮ.

ರೀನಾ: ಪೋಷಕರಿಗೆ ನಿಮ್ಮ ಸಹೆ?
ಡಾ||ವಿ: ಸತ್ಯ , ಶುದ್ಧಕಾಯಕ ನಮ್ಮದಾಗಬೇಕು, ಮೊದಲು ಗಂಡ -ಹೆಂಡಿರಲ್ಲಿ ಸಾಮ್ಯತೆ ಇತ್ತು, ಇಂದು ಅದು ಮರೆಯಾಗಿದೆ. ದೂರದರ್ಶನ PSL Wind ಉಡಾವಣೆ ಮಾಡಿದ ಮಹಿಳೆಯರಿದ್ದಾರೆ, ಅದನ್ನು ಹೆಚ್ಚು ಹೆಚ್ಚು ತೊರಿಸುವುದಾಗಬೇಕು. ಸಂಸಾರಿಕ ಜಗಳಗಳನ್ನು ಪದೇ ಪದೇತೋರಿಸುತ್ತವೆ. ಇದು ಯುವಜನತೆಯ ಮೇಲೆ ಪರಿಣಾಮಬೀರುವುದು ನನಗೆ ನೋವಿನ ಸಂಗತಿ.
ಉತ್ತಮ ತಾಯಂದಿರಾದಲ್ಲಿ ಉತ್ತಮ ಮಕ್ಕಳನ್ನು ಬೆಳೆಸಬಹುದು, ಮಾತು ನುಡಿದ ಮೇಲೂ ಮನಸ್ಸಿನಲ್ಲಿ ಹಚ್ಚಳಿಯದಂತೆ, ನಿಲ್ಲುವಂತಿರಬೇಕು. ಮೊದಲು ಮಾನವನಾಗಬೇಕು.

ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗತಜ್ಞೆ.
ಕರ್ನಾಟಕದಲ್ಲಿ ಮಕ್ಕಳ ಹೃದ್ರೋಗಚಿಕಿತ್ಸಾಕೇಂದ್ರವನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು.
ಕಾರ್ಡಿಯೋಲಾಜಿಕಲ್ ಸೊಸೈಟಿಯ ಪ್ರಥಮ ಮಹಿಳಾ ಅಧ್ಯಕ್ಷೆ.
ಕರ್ನಾಟಕದಲ್ಲಿ ಪ್ರ ಪ್ರಥಮವಾಗಿ ಹೃದಯರಂದ್ರವನ್ನು ಶಸ್ತ್ರಚಿಕಿತ್ಸೆಇದೆamplatzerDevicedನಿಂದ ಮುಚ್ಚಿನಖ್ಯಾತಿಇವರದು.

ಪ್ರಶಸ್ತಿಗಳು: ಅಮೇರಿಕಾದ ಡಾ.ಬಿ.ಸಿ.ರಾಯ್ ಪ್ರಶಸ್ತಿ, ವಚನ ಪಿತಾಮಪ ಡಾ.ವಿ.ಹಳಕಟ್ಟಿ ಪ್ರಶಸ್ತಿ, ೨೦೦೮ ರಲ್ಲಿ ಜೀವಮಾನ ಸಾಧನೆಗೆ ಭಾರತ ರತ್ನ  ಪ್ರಶಸ್ತಿ, ೨೦೦೯ ರಲ್ಲಿ ಡಾ. ಅಬ್ದುಲ್ ಇವರಿಂದ ಕಲಾಂ ರಿಂದ ಶ್ರೀಮತಿ ಪ್ರತಿಭಾ ಪಾಟೀಲ್‌ರವರಿಂದ ಪ್ರಶಸ್ತಿ ಪಡೆದಿದ್ದಾರೆ. ನಾಡಿನಾಧ್ಯಂತ ಹಲವಾರು ಪ್ರಶಸ್ತಿಗಳು ಸಂದಿವೆ.

ಸಂದರ್ಶನ :ಶ್ರೀಮತಿ ರೀನಾ ವೀರಭದ್ರಪ್ಪ