ಚಿತ್ರದುರ್ಗ- ಮಹಿಳೆ ಅಬಲೆಯಲ್ಲ ಸಬಲೆ ಯಾವುದೇ ಕೆಲಸವಾಗಲು ಧೈರ್ಯವಾಗಿ ಮುನ್ನಡೆಯಬೇಕು ಯಾವುದೇ ವಿಷಯಗಳಲ್ಲಾಗಲಿ ಕಿರುಕುಳ ದೌರ್ಜನ್ಯ, ಶೋಷಣೆ ನಡೆದರೆ ಕಾನೂನು ನೆರವು ಪಡೆಯಬೇಕು ಎಂದು ಶ್ರೀಮತಿ ಜಿ. ಯಶೋಧ ರವರು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚಂದ್ರವಳ್ಳಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಹೆಚ್.ಸಿ.ಗಂಗಾಂಬಿಕೆಯವರು ಮಾತನಾಡಿ ಮಹಿಳೆ ಎಲ್ಲಿಯವರೆಗೆ ಹೆದರುತ್ತಾರೋ ಅಲ್ಲಿಯವರೆಗೆ ಶೋಷಣೆ ನಡೆಯುತ್ತಲೇ ಇರುತ್ತದೆ. ಪ್ರತಿಭಟಿಸುವ ಮನೋಭಾವ ಬೆಳೆಸಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಉತ್ತಮ ಗುರಿ ಇಟ್ಟುಕೊಂಡು ಸುಂದರ ಜೀವನ ನಿರ್ಮಾಣ ಮಾಡಿಕೊಳ್ಳಲು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಸಬಲೀಕರಣ ಕೋಶದ ಸಂಯೋಜನಾದಿಕಾರಿಗಳಾದ ಪ್ರೊ. ಬಿ.ಎಸ್.ಉಷಾ, ಮುಖ್ಯಸ್ಥರು, ರಸಾಯನಶಾಸ್ತ್ರ ವಿಭಾಗ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ರಮೇಶ್, ಹಾಗೂ ಪ್ರೊ. ಐ.ಬಿ.ಬಡಿಗೇರ್, ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ ಹಾಗೂ ಮಹಿಳಾ ಸಬಲೀಕರಣದ ಸದಸ್ಯರಾದ ಪ್ರೊ.ವಿ.ಎಸ್.ನಳಿನಿ, ಮುಖ್ಯಸ್ಥರು, ಗಣಿತಶಾಸ್ತ್ರ ವಿಭಾಗ, ಡಾ.ಆರ್.ವಿ. ಹೆಗಡಾಳ್, ವಾಣಿಜ್ಯಶಾಸ್ತ್ರ ವಿಭಾಗ ಇವರುಗಳು ಉಪಸ್ಥಿತರಿದ್ದರು.

ಕು. ಸಿರಿ. ಅಂತಿಮ ಬಿ.ಎ. ಪ್ರಾರ್ಥಿಸಿದರು. ಕು.ಲತಾ, ದ್ವಿತೀಯ ಬಿ.ಎ. ಸ್ವಾಗತ ಕೋರಿದರು. ಕು. ಹಾಲಶ್ರೀ ಅಂತಿಮ ಬಿ.ಎಸ್ಸಿ. ವಂದಿಸಿದರು ಕು. ಹರ್ಷಿತ ಅಂತಿಮ ಬಿ.ಕಾಂ. ಮತ್ತು ಚೈತ್ರ ಅಂತಿಮ ಬಿ.ಕಾಂ. ನಿರೂಪಿಸಿದರು. ªÀ