ಮಳೆ ಎಂದರೆ ಪ್ರತಿಯೊಬ್ಬರ ಹದಿಹರೆಯದ ಜೀವನದಲ್ಲಿ ಮರೆಯಾಗದ ನೆನಪೊಂದು ಕಾಡುತ್ತಿರುತ್ತೆ, ಅಂತಹ ನೆನಪು ಮಳೆ ಬಂದಾಗೆಲ್ಲಾ ನನಗೆ ಕಾಡುತ್ತಿರುತ್ತೆ. ನನಗೂ ಮಳೆ ಎಂದಾಕ್ಷಣ ನನಗೆ ತಟ್ಟನೆ ನೆನಪಾಗುವ ನೆನಪೆಂದರೆ ನಾನು ಎಮ್‌ಎ ಪದವಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಾಡಲು ನಿರ್ಧರಿಸಿ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಕೊನೆಗು ಅದೇ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ವಿಭಾಗದಲ್ಲಿ ಸೀಟನ್ನು ಪಡೆದುಕೊಂಡೆ. ಆಗಷ್ಟ್ ತಿಂಗಳ ಮೊದಲವಾರ ನಮ್ಮ ಕ್ಲಾಸ್ ಆರಂಭವಾಗುತ್ತಿವೆ ಎಂದು ಗೊತ್ತಾಯಿತು, ಆದರೂ ಸ್ವಲ್ಪ ಭಯಯು ನನ್ನಲ್ಲಿ ಕಾಡುತಿತ್ತು ಅದು ಏಕೆ ಎಂದರೆ ನಾನು ಬಿಎ ಪದವಿಯನ್ನು ರಾಣೆಬೆನ್ನೂರಿನಲ್ಲಿ ಲೇಡಿಸ್ ಕಾಲೇಜಿನಲ್ಲಿ ಮುಗಿಸಿದ್ದರಿಂದ ಓಮ್ಮೆಲೆ ಬೇರೊಂದು ಕಾಲೇಜಿಗೆ ಹೋಗಿ ಹೇಗೆ ಹೊಂದಿಕೊಳ್ಳುವುದು ಅಲ್ಲಿ ಬಾಯ್ಸ್ ಎಲ್ರೂ ಇರುತ್ತಾರೆ ಎಂಬ ಅಳುಕು ನನ್ನ ಪದೆ ಪದೇ ಕಾಡುತ್ತಿತ್ತು.
ಹೀಗೆ ದಿನೆ ದಿನೆ ಯೋಚಿಸುತ್ತಾ ಕಾಲಕಳೆಯುತ್ತಿರುವಾಗ ಆಗಷ್ಟ್ ತಿಂಗಳು ಬಂದೆ ಬಿಟ್ಟಿತು. ಆ ಸಮಯ ಒಳ್ಳೆ ಮಳೆಯಗಾಲವಾಗಿದ್ದರಿಂದ ಮನೆಯಿಂದ ಹಾಸ್ಟೇಲ್‌ಗೆ ಬರುವ ಮುನ್ನ ಮುಜಾಗ್ರತೆಗೆ ಬೇಕಾಗಿದ್ದ ಛತ್ರಿಯನ್ನು ಸಹ ತಂದು ಬ್ಯಾಗಿನಲ್ಲಿ ಹಾಕಿಕೊಂಡು ಮಳೆ ಬರುವ ಸಮಯಕ್ಕೆ ಸರಿಯಾಗಿ ಛತ್ರಿಯನ್ನು ಬಳಸಿಕೊಳ್ಳುತ್ತಿದ್ದೆ. ಹೀಗೆ ಕಾಲೇಜಿಗೆ ಹೋದ ನಾಲ್ಕನೆ ದಿನದಲ್ಲಿ ಮಳೆಯಿಂದಾಗಿ ಒಂದು ಮರೆಯಾಗದ ನೆನಪೊಂದು ನನ್ನ ಜೀವನದಲ್ಲಿ ಅಡಕವಾಗಲು ಕಾದು ಕುಳಿತಿತ್ತು. ಅಂದು ನಮ್ಮ ಕ್ಲಾಸ್‌ಗಳು ಸಂಜೆ ೪ ಗಂಟೆಗೆ ಬೀಡುವತ್ತಿಗಾಗಲೇ ಮಳೆರಾಯ ಸುಯ್ಯೋ ಅಂತ ಸುರಿತ್ತಿದ್ದ ನಾನು ಹಾಸ್ಟೇಲ್‌ಗೆ ಬೇಗನೆ ಹೊಗಬೇಕು ಎಂದು ಬ್ಯಾಗ್‌ನಲ್ಲಿದ್ದ ಕೊಡೆಯನ್ನು ತೆಗೆದು ಸುರಿಯುತ್ತಿರುವ ಮಳೆಯಲ್ಲಿಯೇ ಕಾಲೇಜಿನ ಗೇಟಿನ ಮುಂದೆ ಬಂದು ಬಸ್ಸಿಗಾಗಿ ಕಾದು ನಿಂತಿದ್ದೆ, ಹೀಗೆ ಸ್ವಲ್ಪ ಹೊತ್ತು ಕಳೆಯಿತು ಬಸ್ಸು ಬರಲೇ ಇಲ್ಲಾ. ನಾನು ಕೊಡೆಹಿಡಿದು ನಿಂತಿದ್ದ ಜಾಗಕ್ಕೆ ಮಳೆಗೆ ಅಲ್ಪ ಸ್ವಲ್ಪ ನೆನೆದು ನಮ್ಮ ವಿಶ್ವವಿದ್ಯಾನಿಲಯದ ಅಪರಿಚಿತ ಹುಡುಗನೊಬ್ಬ ಬಂದ, ನಾನು ನನ್ನ ಪಾಡಿಗೆ ಇದ್ದಾಗ ಹಲೋ.. ಹಲೋ ಎಂಬ ಧ್ವನಿ ಬಂತು ನಾನು ಆ ಕಡೆ ಈ ಕಡೆ ತಿರಿಗಿ ನೋಡಿದಾಗ ರೀ ನಾನು ನಿಮ್ಮ ಕೊಡೆಕೆಳಗೆ ಬರಬಹುದೆ ಎಂದ ನಾನು ಇದೇನಪಾ ಒಳ್ಳೆ ಬೈಕ್‌ನಲ್ಲಿ ಲಿಪ್ಟ್ ಕೇಳೊತರ ಕೇಳುತಾನಲ್ಲ ಎಂಬ ಎಂದು ಯೋಚಿಸಿದೆ. ಇವಾಗ ನಾನು ಮಾತನಾಡಿದರೆ ನಿನ್ನ ಹೆಸರೇನು ಯಾವ ಊರು ಇಲ್ಲಿ ಯಾವ ಡಿಪಾರ್‍ಟ್‌ಮೆಂಟ್ ಎಂದು ಕೇಳುತ್ತಾನೆ ಎಂದು ನನಗೆ ಭಯವಾಗಿಏನನ್ನೂ ಮಾತನಾಡದೆ ಸುಮ್ಮನೆ ಧ್ವನಿ ಕೇಳಿದರು ಕೇಳದ ರೀತಿಯಲ್ಲಿ ನಿಂತಾಗ ಮತ್ತೆ ಬರ್‍ಲಾ ಎಂಬ ಧ್ವನಿ ಕೇಳಿಬಂತು.. ನಾನು ಬಿಗುಮಾನದಿಂದ ಅವನಕಡೆ ನೋಡುವಷ್ಟೋತ್ತಿಗೆ ಬಸ್ಸು ಬಂದೆ ಬಿಟ್ಟಿತು. ಅಪ್ಪಾ ಎಂದು ನಿಟ್ಟುಸಿರು ಬಿಡುತ್ತಾ ಛತ್ರಿಯನ್ನು ಮಡಿಚಿ ಬಸ್ಸು ಹತ್ತಿದೆ, ಅಲ್ಲಿಯೂ ನಾನು ಕುಳಿತಿದ್ದ ಪಕ್ಕದಲ್ಲಿ ಖಾಲಿ ಸೀಟು ಇತ್ತು ಅದನ್ನು ನೋಡಿದ ಆ ಹುಡುಗ ನಾನು ಇಲ್ಲಿ ಕುಳಿತುಕೊಳ್ಳಬಹುದಾ ಎಂದಾ, ಛೇ.. ಇದೇನಪಾ ಎಂಧೂ ಮನವರಿಕೆ ಮಾಡಿಕೊಳ್ಳುತ್ತಾ ಬಾ ಕುಳಿತುಕೋ ಎಂದು ನಾನು ಮುಂದೆ ಒಂದು ಖಾಲಿ ಇದ್ದ ಸೀಟ್‌ನಲ್ಲಿ ಹೋಗಿ ಕುಳಿತುಕೊಂಡೆ ಅವನಿಂದ ನನ್ನ ಮಾತುಗಳಿಗೆ ಪುಲ್‌ಸ್ಟಾಪ್ ಹಾಕಿದೆ.
ಆ ಅಪರಿಚಿತನಿಂದ ತಪ್ಪಿಸಿಕೊಂಡು ಹಾಸ್ಟೇಲ್ ಸೇರಿಕೊಂಡೆ ಅಂದಿನ ರಾತ್ರಿಯೆಲ್ಲಾ ಆ ಹುಡುಗನ ಬಗ್ಗೆ ಸ್ನೇಹಿತರೊಂದಿಗೆ ಮಾತು ಹಂಚಿಕೊಳ್ಳುತ್ತಾ ನಗುವಿನ ಕಡಲಲ್ಲಿ ತೇಲಿದೆವು. ಮತ್ತೆ ಮತ್ತೆ ಮಳೆ ನೋಡಿದಾಗಲೆಲ್ಲಾ ಆ ಅಪರಿಚಿತ ವ್ಯಕ್ತಿ ಜೋಕರ್‌ನಂತೆ ಭಾಸವಾಗುತ್ತಾನೆ. ಅದೇ ಆ ಮೊದಲ ಮಳೆಯ ನೆನಪೆ ನನಗೆ ಮಳೆ ಎಂದಾಕ್ಷಣ ಎಂದು ಮರೆಯಲಾಗದ ನೆನಪಾಗಿದೆ.

  • ಪವಿತ್ರ ಬೆನ್ನೂರು, ಕರೂರು