ತಾಯಿಯ ಹಾಲು ಮಕ್ಕಳಿಗೆ ಬಹಳ ಮುಖ್ಯವಾದದ್ದು, ಆದ್ರೆ ಇತ್ತೀಚಿನ ದಿನಗಳಲ್ಲಿ  ಹೆಣ್ಣುಮಕ್ಕಳು ತಮ್ಮ ಸೌಂದರ್ಯ ಎಲ್ಲಿ ಹಾಳಾಗುತ್ತೋ ಅನ್ನೋ ಭಯದಿಂದ ಎದೆ ಹಾಲುನ್ನು ಮಕ್ಕಳಿಗೆ ಕೊಡುವುದಿಲ್ಲ.  ಆದ್ರೆ ಶಿಶುಗಳಿಗೆ ಸ್ತನ ಹಾಲು ಸೂಕ್ತ ಪೋಷಣೆಯನ್ನು ಒದಗಿಸುತ್ತದೆ. ಇದು ವಿಟಮಿನ್ಗಳು, ಪ್ರೋಟೀನ್ ಮತ್ತು ಕೊಬ್ಬಿನ ಅಂಶಗಳ ಆಗರ.!.

 ತಾಯಿಯ ಎದೆ ಹಾಲ ಶಿಶುವಿಗೆ ಜೀರ್ಣಿಸಿಕೊಳ್ಳಲು ತುಂಬಾ ಸುಲಭ ಹಾಗೂ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡುತ್ತದೆ.

ತಾಯಿಯ ಹಾಲು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡುತ್ತವೆ. ಸ್ತನ್ಯಪಾನ ನಿಮ್ಮ ಮಗುವಿಗೆ ಬರುವ ಅಸ್ತಮಾ ಅಥವಾ ಅಲರ್ಜಿಯನ್ನು ತಡೆಯುತ್ತವೆ ಅಲ್ಲದೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಗೊಳ್ಳುತ್ತದೆ. ಕನಿಷ್ಠ ಮಗುವಿಗೆ ಒಂದು ವರೆ ವರ್ಷವಾದರೂ ಹಾಲು ಕುಡಿಸುವುದು ಉತ್ತಮ ಎಂದು ಡಾಕ್ಟರ್ ಹಾಗೂ ಹಿರಿಯರು ಹೇಳುತ್ತಾರೆ.!