ಶಿವಮೊಗ್ಗ ನಗರ ವಾಸಿ ಶ್ರೀಮತಿ ಬೇದ್ರೆ ಎನ್.ಶಾಂತಾಬಾಯಿ (೬೮)ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿರುವರು. ಶಿಕ್ಷಕಿಯಾಗಿ ಅಪೂರ್ವವಾದ ಸೇವೆ ಸಲ್ಲಿಸಿದವರು. ಬೇದ್ರೆ ಪೌಂಢೇಷನ್ ಮಹಾಪೋಷಕರಾಗಿ ಸೇವೆ ಸಲ್ಲಿಸಿರುವರು. ಅವರ ಅಂತಿಮ ಇಚ್ಚೆಯಂತೆ ಕಣ್ಣುಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಗೆ, ಅವರ ದೇಹವನ್ನು ಶಿವಮೊಗ್ಗ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ದಾನ ಮಾಡಲಾಗಿದೆ. ಪುತ್ರ ಖ್ಯಾತ ಲೇಖಕರಾದ ಬೇದ್ರೆ ಎನ್. ಮಂಜುನಾಥ್, ಪುತ್ರಿ ಬೇದ್ರೆ ಎನ್.ಅಂಬಿಕಾ ಮತ್ತು ಅಳಿಯ ಸುನಿಲ್, ಸೊಸೆ ಸುಧಾ ಮತ್ತು ಮೊಮ್ಮಕ್ಕಳನ್ನು ಅಗಲಿರುವರು. ಕುವೆಂಪು ವಿಶ್ವವಿದ್ಯಾಲಯದ ಡಾ.ಕುಮಾರಚಲ್ಯ, ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ವೈದ್ಯರಾದ ಡಾ||ಪುರುಷೋತ್ತಮ, ವಕೀಲರಾದ ಆರ್.ಆರ್.ರುದ್ರಪ್ಪ, ಉದ್ಯಮಿಗಳಾದ ಗೋಪಾಲಕೃಷ್ಣ , ರಮೇಶ್ ಮೊದಲಾದ ಗಣ್ಯರು ಅಂತಿಮ ದರ್ಶನ ಪಡೆದರು.