ಚಿತ್ರದುರ್ಗ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಹೊರಟಿರುವ ಪೂನಾದ ಪ್ರತಿಭಾ ದಾಖನಿ ಬುಧವಾರ ಸಂಜೆ ಚಿತ್ರದುರ್ಗಕ್ಕೆ ಆಗಮಿಸಿದಾಗ ರೋಟರಿ ಕ್ಲಬ್‌ಗಳ ವತಿಯಿಂದ ಗಾಂಧಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಪ್ರತಿಭಾ ದಾಖನಿ ಸೈಕಲ್ ಸವಾರಿ ಎಂದರೆ ಸಹಜವಾಗಿ ಎಲ್ಲರೂ ಕೇವಲವಾಗಿ ಮಾತನಾಡುತ್ತಾರೆ. ಆದರೆ ನಿಜವಾಗಿಯೂ ಸೈಕಲ್ ತುಳಿಯುವುದರಿಂದ ದೇಹಕ್ಕೆ ವ್ಯಾಯಾಮವಾದಂತಾಗುತ್ತದೆಯಲ್ಲದೆ ಪರಿಸರಕ್ಕೂ ಹಾನಿಯಾಗುವುದಿಲ್ಲ. ಕಾರು ಬೈಕ್‌ಗಳನ್ನೆ ಎಲ್ಲರೂ ಇಷ್ಠಪಡುವುದಾದರೆ ಪೆಟ್ರೋಲ್, ಡೀಸೆಲ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸೈಕಲ್‌ನಿಂದಾಗುವ ಪ್ರಯೋಜನವನ್ನು ತಿಳಿಸಿದರು.
ಅಶೋಕ್‌ಖಾಲೆ ಬಾಂಬೆಯ ೬೩ ವರ್ಷದವರು ಸೈಕ್ಲಿಂಗ್ ಮಾಡುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರಿಗೆ ಗೌರವ ಸೂಚಿಸುವುದಕ್ಕಾಗಿ ಭೇಟಿಯಾ ಖೇಲೆಂಗಿ ಜೀತೇಂಗಿ ಇಂಡಿಯಾ
ಎನ್ನುವ ಘೋಷಣೆಯೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಹೊರಟಿದ್ದೇನೆ. ಇದಕ್ಕೆ ಯಾರ ಆಶ್ರಯ ಸಹಾಯವನ್ನು ಪಡೆಯದೆ ಮಹಿಳೆಯರು ಸೈಕಲ್ ಓಡಿಸುವುದರಲ್ಲಿ ಸಮರ್ಥರು ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕಾಗಿರುವುದು ನನ್ನ ಉದ್ದೇಶ. ಸೈಕಲ್ ಸವಾರರನ್ನು ಬೇರೆ ವಾಹನ ಸವಾರರು ಓವರ್ ಟೇಕ್ ಮಾಡುವುದು. ಕೆಳಗೆ ಬೀಳಿಸುವುದು ಈ ರೀತಿಯಲ್ಲಿ ಹೀನಾಯವಾಗಿ ಕಾಣಬಾರದು ಎಂದು ಸೈಕ್ಲಿಂಗ್ ಪ್ರತಿಭಾ ದಾಖನಿ ವಿನಂತಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ಹಾಗೂ ಮಹಿಳಾ ಸಮಾಜದ ಕಾರ್ಯದರ್ಶಿ ಮೋಕ್ಷರುದ್ರಸ್ವಾಮಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸವಿತಾಸುನೀಲ್, ಜ್ಯೋತಿಲಕ್ಷ್ಮಣ್, ಶೈಲ ವಿಶ್ವನಾಥ್, ರೂಪ, ಸುಜಾತ, ಶಾಲಿನಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು