೧೮೯೧ ನೇ ಏಪ್ರಿಲ್ ೧೪ ನೇ ತಾರೀಖು ಭಾರತದ ಪಾಲಿಗೆ ಒಂದು ಶುಭ ದಿನ ಅದರಲ್ಲೂ ಅಸ್ಪ್ರುಶ್ಯತೆಯಕತ್ತಲಲ್ಲಿ ಕುರುಡಾಗಿದ್ದವರು  ಮುಂದೊಂದು ದಿನ ಸೂರ್‍ಯನ ಕಿರಣಗಳ ಬೆಳಕಿನಲ್ಲಿ ತಮ್ಮ ಕತ್ತಲನ್ನು ದೂರ ಮಾಡುವ ಆಶಾಕಿರಣವೊಂದು ಉದಯಿಸಿದ ದಿನ!
ಹೌದು, ಗುರುಗಳ ಹೆಸರನ್ನುಅಭಿದಾನವಾಗಿ  ಪಡೆದು ಅಂಬೆಡ್ಕರ್ ಆದ ಭೀಮರಾವ್‌ರಾಂಜೀಹುಟ್ಟಿದ ಅದ್ಭುತವಾದ  ದಿನವದು. ಮೂಲತ: ಮಹಾರಾಷ್ಟ್ರದ ಅಂಬೇವಾಡೆಯವರಾದರೂ, ಅವರು ಹುಟ್ಟಿದ್ದು ಮಧ್ಯಪ್ರದೇಶದ ಮ್ಹಹೋ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ರಾಮ್‌ಜಿಯವರು ಸ್ಯೆನ್ಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಕುಟುಂಬ ಸಮೇತ ಮ್ಹಹೋ ಸ್ಯೆನ್ಯ ನೆಲೆಯಲ್ಲಿ  ನೆಲೆಸಿದ್ದರು. ಕಬೀರರ ತತ್ವಗಳಲ್ಲಿ ನಂಬಿಕೆಯುಳ್ಳ  ತಾಯಿ, ಮಕ್ಕಳಲ್ಲಿ ನೀತಿ ಭೋಧನೆ ಸಂಸ್ಕಾರ ತಂಬುವ ತಂದೆ. ಇಂಥ ವಾತಾವರಣದಲ್ಲಿ ಬೆಳೆದ ಬಾಲಕ ಅಂಬೇಡ್ಕರ್ ಸಹಜವಾಗಿಯೇ ಬದುಕಿನ ಸಂಸ್ಕಾರಗಳನ್ನು ಮ್ಯೆಗೂಡಿಸಿಕೊಂಡು ಬೆಳೆದರು.
ಸತಾರಾದಲ್ಲಿ ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಮಡುತ್ತಿರುವಾಗ ಅಲ್ಲಿನ ಸವರ್ಣೀಯ ವಿಧ್ಯಾರ್ಥಿಗಳ ಅಮಾನುಷ ವರ್ತನೆಯಿಂದ ನೊಂದರೂ, ಅಂಬೇಡ್ಕರ್ ಕೀಳರಿಮೆಯಿಂದ ಕುಗ್ಗದೇ ಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ಏಕಾಗ್ರತೆಯಿಂದ ಅಭ್ಯಾಸಮಾಡತೊಡಗಿದರು. ಜೊತೆಜೊತೆಗೆ ಮೇಲ್ವರ್ಗದವರ ಕ್ರೌರ್ಯ ದಬ್ಬಾಳಿಕೆಗಳಿಂದ ಸದಾ ಅವಮಾನ ಆತಂಕಗಳಲ್ಲಿ ಬದುಕಬೇಕಾದ ತನ್ನ ಜನಗಳು ಸಾಮಾಜಿಕ, ಆರ್ಥಿಕ, ಶ್ಯೆಕ್ಷಣಿಕವಾಗಿ ಶೋಷಣೆಗೆ ಒಳಗಾಗಬೇಕಾದ ಪರಂಪರೆಯಿಂದ ಅವರಲ್ಲಿ ಉಂಟಾದ ಬಂಡಾಯ ಅವರನ್ನು ಇನ್ನೂ ಇನ್ನೂ ಹೆಚ್ಚು ಹೆಚ್ಚು ಜ್ಞಾನ ಪಡೆಯುವಂತೆ ಪ್ರೇರೇಪಿಸಿತು. ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಓದಬೇಕೆಂಬ ಅವರ ಆಸೆಗೆ ಅಸ್ಪ್ರುಶ್ಯನೆಂಬ ಕಾರಣಕ್ಕೆ ಅವಕಾಶ ಸಿಗಲಿಲ್ಲ. ಆದರೂ ಛಲ ಬಿಡದ ಅಂಬೇಡ್ಕರ್ ರವರು ಸ್ವಸಾಮರ್ಥದಿಂದಲೇ ಸಂಸ್ಕೃತವನ್ನುಕಲಿತರು.
ಅದೇ ಛಲ ಅವರ ಕಲಿಕೆಯನ್ನು ಒರೆಗೆ ಹಚ್ಚುತ್ತಾ ಹೋಯಿತು. ಪದವಿಯ ನಂತರ ಲೆಫಿಟಿನೆಂಟ್‌ಹುದ್ದೆಯಲ್ಲಿದ್ದರೂ ಕಲಿಯುವ ಆಸೆ ಹೆಚ್ಚುತ್ತಲೇ ಹೋಯಿತು. ತಂದೆಯ ನಿಧನದ ನಂತರ ಹುದ್ದೆಯನ್ನು ಬಿಟ್ಟು ಮುಂದಿನ ವಿದ್ಯೆಭ್ಯಾಸಕ್ಕೆ ಅಮೇರಿಕಾಗೆ ಹೋದರು. ರಾಜ್ಯಶಾಸ್ತ್ರ, ನ್ಯೆತಿಕಶಾಸ್ತ್ರ, ಸಮಾಜಶಾಸ್ತ್ರ, ಮನವಶಾಸ್ತ್ರ, ತತ್ವಶಾಸ್ತ್ರದಲ್ಲಿ ಎಂ.ಎ., ಪದವಿ ಪಡೆದರು. ’ಭಾರತದರಾಷ್ಟ್ರೀಯ ವರಮಾನ ಮತ್ತು ಹಣಕಾಸು’ ವಿಷಯ ಕುರಿತು ಪ್ರಬಂಧ ಬರೆದು ಪಿ.ಹೆಚ್.ಡಿ ಪದವಿ ಪಡೆದ ಅಂಬೇಡ್ಕರ್ ಅಮೇರಿಕಾದಿಂದ ಲಂಡನ್ಗೆ ೧೯೧೭ ರಲ್ಲಿ ಹೋಗಿ ’ನ್ಯಾಯಶಾಸ್ತ್ರ’ ಓದಲು ದಾಖಲಾದರು. ಅವರ ಬುದ್ಧಿವೆಂತಿಕೆಯನ್ನು ಮೆಚ್ಚಿ ಬರೋಡ ಮಹರಾಜರು ತಮ್ಮ ಸಂಸ್ಥಾನದಲ್ಲಿ ಉನ್ನತ ಹುದ್ದೆಯನ್ನು ಕೊಡಲು ನಿರ್ಧರಿಸಿದರು. ಆದರೆ ಮೇಲು ಜಾತಿಯ ಅಧಿಕಾರಿಗಳ ಅಸಹರಾದಿಂದ ಅದು ಸಾಧ್ಯವಾಗಲಿಲ್ಲ. ನಂತg ಅವರಿಗೆ ಮಿಲಿಟರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಆದರೆ ಅವರ ಕೆಳಗಿನ ಸಿಪಾಯಿಗಳು ಅವರನ್ನು ಗೌರವಿಸಲಿಲ್ಲ ಅವರಿಗೆ ತಂಗಲು ಜಾಗವೂದೊರೆಯಲಿಲ್ಲ. ತನ್ನ ಕೆಳಗಿನವರ ಅಸಭ್ಯ ವರ್ತನೆಯಿಂದ ಮನನೊಂದ ಅಂಬೇಡ್ಕರ್ ಮುಂಬಯಿಗೆ ಹಿಂದಿರುಗಿದರು.
ನಂತರ ಸಿಡೆನ್‌ಹ್ಯಾಂ ಕಾಲೆಜಿನಲ್ಲಿದೊರೆತ ಪ್ರಾಧ್ಯಾಪಕ ಹುದ್ದೆಯ ಸಂಪಾದನೆಯಲಿ ಅಗತ್ಯಕ್ಕೆ ತಕ್ಕಷ್ಟು ಖರ್ಚ್ಚು ಮಾಡಿ ಉಳಿದ ಹಣವನ್ನು ಕೂಡಿಟ್ಟು ೧೯೨೦ರಲ್ಲಿ ಲಂಡನ್‌ಗೆ ಹೋದರು. ೧೯೨೧ರಲ್ಲಿ ’ಬ್ರಿಟೇಷ್ ಭಾರತದ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ’ ಎಂಬ ಸಂಶೋದನ ಪ್ರಬಂಧಕ್ಕೆ ಪಿ.ಹಚ್.ಡಿ ಪದವಿ ಹಾಗು ’ರೂಪಾಯಿ ಸಮಸ್ಯೆ’ ಮಹಾಪ್ರಬಂಧಕ್ಕೆ ಡಿ.ಎಸ್.ಸಿ ಪದವಿಯನ್ನು ಲಂಡನ್ ವಿಶ್ವವಿದ್ಯಾನಿಲಯವು ನೀಡಿ ಗೌರವಿಸಿತು. ಅಲ್ಲಿಂದ ಹಿಂದಿರುಗಿದ ಅಂಬೇಡ್ಕರ್‌ರವರು ಸ್ವತಂತ್ರವಾಗಿ ಮುಂದುವರೆಯಲಿಚ್ಚಿಸಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ದಲಿತರನ್ನು ಸಂಕೋಲೆಗಳಿಂದ ಬಿಡಿಸುವ ಮಹದಾಸೆಯಿಂದ ೧೯೨೪ರಲ್ಲಿ ದಲಿತ ಹಿತಕಾರಿಣಿ ಸಭಾ ಸ್ಥಾಪಿಸಿದರು. ದಲಿತರ ಶಿಕ್ಷಣ, ಜೀವನ ಸುಧಾರಣೆ ಹಾಗೂ ಸಂಸ್ಕೃತಿಯ ಪ್ರಸಾರ ಮುಂತಾದ ದ್ಯೇಯಗಳನ್ನು ಹೊಂದಿದ್ದ ಸಭಾದಕಾರ್‍ಯಕಾರಿ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್, ಉದೋಗ, ಕ್ರಷಿ ತರಬೇತಿ ಶಾಲೆಗಳನ್ನು ತೆರೆಯುವ ಮೂಲಕ ದಲಿತರ ನಾಯಕನಾಗಿ ರೂಪುಗಂಡರು. ೧೯೨೭ರಲ್ಲಿ ಅವರು ಮುಂಬಯಿ ವಿಧಾನ ಪರಿಷತ್ ಸದಸ್ಯರಾಗಿ ರ್ಕಾರದಿಂದ ನಾಮಕರಣಗೊಂಡರು. ದಲಿತರ ಹಕ್ಕು ಮತ್ತು ಸ್ವಾಂತಂತ್ರ್ಯಕ್ಕಾಗಿ ವೇಧಿಕೆಯನ್ನು ಸಮರ್ಥವಾಗಿ ಬಳಸಿಕೊಡರು.
ಮನುಷ್ಯ ವಿರೋಧಿ ಸ್ಮ್ರುತಿಗಳು ಮತ್ತು ಧರ್ಮಗಳಿಂದ ದಲಿತರನ್ನು ಬಿಡುಗಡೆಗೊಳಿಸುವ ನಿಟ್ಟನಲ್ಲಿ ಕೆಲವು ದಿಟ್ಟ ಹೆಜ್ಜೆಗಳನ್ನಿಟ್ಟ ಅವರು ಪ್ರಥಮದಲ್ಲಿ ಮುಂಬಯಿಯ ಕೊಲಬಾದಲ್ಲಿನ ಕೊಳದ ನೀರನ್ನು ಮುಟ್ಟುವಲ್ಲಿ ಯಶಸ್ವಯಾದರೂ ಕಲವೇ ಗಂಟೆಗಳಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆದವು. ಸವರ್ಣೀಯರ ಪರವಾಗಿ ಕೆಲವು ಪತ್ರಿಕೆಗಳು ಬರೆದವು. ಮೂಕರಾದ ದಲಿತರ ಸ್ಥಿತಿಗತಿ ಮತ್ತು ಅವರ ವಿರುದ್ಧದ ಅಪಪ್ರಚಾರಗಳ ವಿರುದ್ಧ ಬರೆಯಲು ಬಹಿಷ್ಕ್ರತ ಭಾರತ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.
೧೯೩೦ರಲ್ಲಿ ಲಂಡನ್ ದುಂಡು ಮೇಜಿನ ಪರಿಷತ್ತಿಗೆ ಬ್ರಿಟೀಷ್ ನೀಡಿz ಆಹ್ವಾನವನ್ನು, ದಲಿತರ ಸ್ಥಿತಿ ಗತಿಯ ಕುರಿತು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ೧೯೩೨ನೇ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯ ಕುರಿತು ಅಂಬೇಡ್ಕರ್ ವಾದ ಮಂಡಿಸಿದಾಗ ಅದನ್ನು ಗಾಂಧೀಜಿಯವರು ವಿರೋಧಿಸಿ ಅಮರಣಾಂತರ ಉಪವಾಸ ಕುಳಿತರು. ಆಗ ಅನಿವಾರ್‍ಯವಾಗಿ ಮೀಸಲಾತಿ ರೀತಿಯ ಒಪ್ಪಂದಕ್ಕೆ ಬರಬೇಕಾಯಿತು. ಮುಂದೆ ಪೂನಾ ಒಪ್ಪಂದವೆಂದುಕರೆಯಲಾಯಿತು.
ಈ ರೀತಿಯಲ್ಲಿ ಸವರ್ಣೀಯರ ನಿರಂತರ ತುಳಿತಕ್ಕೆಕ್ಕೊಳಗಾದ ವರ್ಗದ ಪರವಾಗಿ ಏಕ ವ್ಯಕ್ತಿ ಸ್ಯೆನ್ಯವಾಗಿ ಹೋರಡಿz ಡಾ.ಬಾಬಾ ಸಾಹೇಬ್‌ಅಂಬೇಡ್ಕರ್‌ರವರ ಹೋರಾಟ ಸಾರ್ಥಕತೆಯನ್ನು ಪಡೆಯಬೇಕಾದರೆ ಎಲ್ಲಾದಲಿತರೂ ಅವರಂತೆ ಛಲದಿಂದ ಬದುಕಬೇಕು. ಜ್ನಾನವಂತರಾಗಬೇಕು. ಸವರ್ಣಿಯರಿಗಿಂತಲೂ ಹೆಚ್ಚು ಭೌದ್ಧಿಕ ಮಾನಸಿಕ ಸೃಜನತೆಯನ್ನು ಹೊಂದಿದ್ದ ಅಂಬೇಡ್ಕರ್‌ರವರು ಆದರ್ಶಪ್ರಾಯರಾಗಬೇಕಾಗಿದೆ. ಭೀಮಬಲದ ಸೇನೆಗೆ ಪ್ರತಿಯಬ್ಬ ದಲಿತನೂ ಮುಂದಾಳಾಗಬೇಕಾಗಿದೆ. ಮೀಸಲಾತಿ ಭಿಕ್ಷೆಯಲ್ಲ ಮನುಷ್ಯ ಮನುಷ್ಯನನ್ನು ತನ್ನಂತೆ ಎಂದು ಗೌರವಿಸದಾಗ ಸರ್ಕಾರ ನೀಡಿದ ಒಂದು ಅವಕಾಶ ಮಾತ್ರ ಎಂಬುದನ್ನು ಮನವರಿಕೆ ಮಾಡಿಕೊಡಬೇಕಗಿದೆ

ಹರಿನೇತ್ರಾ, ಹರಿಹರ.