Tag "ಸಿರಿಗೆರೆ ಶ್ರೀ"

ನೀರು ಪೋಲು ಮಾಡದಂತೆ ಕಂಕಣ ಕಟ್ಟಿರಿ: ಸಿರಿಗೆರೆ ಶ್ರೀಗಳು

ಸಿರಿಗೆರೆ: ನೀರು ಬಹಳ ಅಮೂಲ್ಯವಾದ ಜೀವದ್ರವ. ಅದನ್ನು ಯಾವುದೇ ಕಾರಣಕ್ಕೂ ಪೋಲು ಮಾಡದಂತೆ ಜಾಣ್ಮೆಯಿಂದ ಬಳಸಬೇಕು. ಆದ್ದರಿಂದ ನಮ್ಮ ಜನರು ನೀರು ಪೋಲು ಮಾಡುವುದಿಲ್ಲವೆಂದು ಕಂಕಣ ಕಟ್ಟಿ ಪ್ರತಿಜ್ಞೆ ಮಾಡಬೇಕು. ಇದು  ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಗ್ರಾಮೀಣ ಜನರಿಗೆ ಬೋಧಿಸಿದ ಹಿತನುಡಿ. ಓಬಳಾಪುರದಲ್ಲಿ ಬಹಳ ವಿಶೇಷವಾಗಿ ಮಾಡಿಸಿರುವ ಪೈಪ್‌ಲೈನ್ ಹೊಂದಿಸಿ ನೀರು ಬರುವ ಹಾಗೆ ಮಾಡಿರುವುದಕ್ಕೆ  ಸಂತಸ ತಂದಿದೆ. ಎಂದು ಅವರು ಶ್ಲಾಘಿಸಿದರು. ಸೂಳೆಕೆರೆಯಿಂದ ಸಿರಿಗರೆ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿರುವ ಸಂದರ್ಭದಲ್ಲಿ ಶ್ರೀಗಳವರು ಸೀಗೆಹಳ್ಳಿ, ಹೊಸರಂಗಾಪುರ, ಅಳಗವಾಡಿ, ಓಬಳಾಪುರ, ಹಳುವುದರ ಹಟ್ಟಿ, ಹಳವುದರ ಈ ಹಳ್ಳಿಗಳಗೆ ಯುಗಾದಿಯ ದಿನವಾದ ಬುಧವಾರ