ಚಿತ್ರದುರ್ಗ: ಎಸ್.ಜೆ.ಎಂ. ವಿದ್ಯಾಪೀಠದ ಭರಮಸಾಗರದಲ್ಲಿರುವ ಬಾಪೂಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಎನ್. ಮಮತ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪ್ರಶಸ್ತಿ ನೀಡಿದೆ.

ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ತಿರುಕ ಅವರ ಲೋಕದೃಷ್ಟಿ- ವಿವಿಧ ನೆಲೆಗಳು ಎಂಬ ವಿಷಯದ ಪ್ರಬಂಧ ಮಂಡನೆಗೆ ಈ ಪದವಿಯನ್ನು ನೀಡಲಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.