ಚಿತ್ರದುರ್ಗ: ಕುವೆಂಪು ವಿಶ್ವವಿದ್ಯಾಲಯವು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಮಲ್ಲಿಕಾರ್ಜುನ ಅವರು ವಾಣಿಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ “ಸೇವೆಯ ಗುಣಮಟ್ಟ ಮತ್ತು ಆಯ್ದ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಕ್ಷಮತೆಯ ಮೇಲೆ ಇ-ಬ್ಯಾಂಕಿಂಗ್ ಪ್ರಭಾವ” ಎನ್ನುವ ಮಹಾಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಪ್ರಧಾನ ಮಾಡಿದೆ.

  ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ.ವಿ ಗಿರಿಧರ್‍ರವರ ಮಾರ್ಗದರ್ಶನ ಮಾಡಿದ್ದರು ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.