ನವೆಂಬರ್ ಬಂತಂದ್ರೇ ಸಾಕು ನುಡಿ ಕನ್ನಡ ನಡೆ ಕನ್ನಡ ಎಂದು ಕರ್ನಾಟಕದ ಉದಗಲಕ್ಕೂ ಕನ್ನಡವೇ ಮೊಳಗಿವುದನ್ನು ನಾವು ಕಾಣಬಹುದು ಆದರೆ ಈ ನವೆಂಬರ್ ಬಂತು ಅಂದರೆ ಸಾಕು ನನ್ನಗೆ ಎಲಿಲ್ಲದ ಭಯ ಶುರುವಾಗುವುದು ಏನಾಪ್ಪ ಇವುನೂ ಎಲ್ರೂ ಕನ್ನಡ ದಿನ ಬಂತು ಅಂದರೆ ಹುಡುಗರೇಲ್ಲಾ ಹಬ್ಬ ಮಾಡುತ್ತಾರೆ ಇವ್ನ್ಯಾಕಪ್ಪ ಹೀಗೆ ಅಂತನೇ ಎಂದು ಅನ್ಕೋಬೇಡಿ ನನ್ಗೂ ಸಹ ಕನ್ನಡ ಹಬ್ಬ ಅಂದರೆ ತುಂಬಾನೇ ಇಷ್ಟ.
ನಾನು ಹಳ್ಳಿಯ ಹುಡುಗ ನಮ್ಮ ಹಳ್ಳಿಯಲ್ಲಿ ನಾಡ ಹಬ್ಬ ಹಾಗೂ ರಾಷ್ಟ್ರೀಯ ಹಬ್ಬಗಳು ಬಂತು ಅಂದರೆ ಸಾಕು ನಾನು ಮತ್ತು ನನ್ನ ಗೆಳೆಯರು ಆ ದಿನ ಆಚರಿಸಲ್ಲಿಕೆ ಕೂತುಹಲದಿಂದನೆ ಕಾಯ್ತ ಇರ್ತೀವಿ
ಹೀಗೆ ಪ್ರತೀ ಹಬ್ಬದ ಹಾಗೇ ಕನ್ನಡ ರಾಜ್ಯೋತ್ಸವ ಕೂಡ ಬಂತು ಆದರೆ ಅದರ ಹಿಂದಿನ ದಿನದ ರಾತ್ರಿ ಮಾತ್ರ ನಾನು ಮತ್ತು ನನ್ನ ಗೆಳೆಯರು ಕಾರ್ಯಕ್ರಮ ಸಿದ್ದತೆಯಲ್ಲಿ ತುಂಬಾನೇ ಕಷ್ಟಪಡುತ್ತಿದ್ದೇವೆ. ಎಲ್ಲಾ ಕಾರ್ಯಕ್ರಮಗಳಿಗೆ ಹಿಂಬು ನೀಡುವಂತವು ಮಾವಿನ ಎಲೆÉ ಮತ್ತು ಬಾಳೆ ಕಂದು ಈ ವಸ್ತುಗಳನ್ನು ತರುವುದೇ ಚಾಲೆಂಜ್ ಆಗಿತ್ತು ಏಕೆಂದರೆ ನಮ್ಮ ಊರಿನಲ್ಲಿ ಮತ್ತು ಸುತ್ತಮತ್ತಲಿನ ಊರಿನಲ್ಲೂ ಸಹ ಈ ಬಾಳೆ ಕಂದು ಮತ್ತು ಮಾವಿನ ಎಲೆ ಸಿಗುತ್ತಿರಲ್ಲಿ ಅದ್ಕೇ ಸುಮಾರು ನಮ್ಮೂರಿನಿಂದ ನಾಲ್ಕು ಹಳ್ಳಿಯ ದಾಟಿ ಹೊಗಬೇಕಿತ್ತು, ಆದರೆ ಯಾವ ಹೊಲದ ಮಾಲೀಕರು ಕೇಳಿದರೇ ಕೊಡುತ್ತಿರಲ್ಲಿ ಆದ್ದರಿಂದ ಕಳ್ಳತನ ಅವಶ್ಯವಾಗಿತ್ತು. ಆದ್ದರಿಂದ ಹಬ್ಬದ ಹಿಂದಿನ ರಾತ್ರಿ ಸುಮಾರು 12,45 ಸುಮಾರಿಗೆ ನಾನು ಮತ್ತು ನನ್ನ ಗೆಳೆಯರೇಲ್ಲಾ ಬಾಳೆ ಕಂದು ಕದ್ದಿಯಲ್ಲಿಕ್ಕೆ 2 ಬೈಕಲ್ಲಿ ಆರು ಮಂದಿ ಗೆಳೆಯರು ಹೋರಟೇ ಬಿಟ್ಟೇವು ಹೊಲದ ಅರ್ದ ಕಿಲೋಮಿಟರ್ ಬೈಕ್ ನಿಲ್ಲಿಸಿ ಹೊಲದ ಬೇಲಿ ಹತ್ತಿ ಗುಮ್ಮನ ಹಾಗೆ ಒಳ ನುಸುಳಿದೆವು ಕತ್ತಲು ಅಂದರೆ ಯಾರಿಗೂ ಭಯ ವಿಲ್ಲ ಆದರೆ ಕಳ್ಳತನ ಎಂದರೆ ಒಬ್ಬನನ್ನು ಬಿಟ್ಟರೇ ಎಲ್ಲಾರಿಗೂ ಸಹ ಭಯ ಆದರೆ ಅವನ ದೈರ್ಯದ ಬೆನ್ನು ಹತ್ತಿ ಹೋರಟಿದ್ದವರು ನಾವು. ಚಿಕ್ಕ ಬಾಳೆ ತೋಟ ರಾತ್ರಿಯಲ್ಲಿ ದೊಡ್ಡ ಕಾಡಿನಂತೆ ಬಾಸವಾಗುತ್ತಿತ್ತು. ಚಿಕ್ಕ ಚಿಕ್ಕ ಬಾಳೆ ಕಂದನ್ನು ನಾನು ಬರ್ತಡೇ ಕೇಕ್ ತರಹ ಕತ್ತಿರಿಸುತ್ತಿದ್ದರು ಸಹ ಜೋರಾಗಿಯೇ ಕೊಯುವ ಶಬ್ದ ಕೇಳಿಸುತ್ತಿತು. ಹೀಗೆ ಎಲ್ಲಾ ಗೇಳೆಯರು ಸುಮಾರು ಹತ್ತು ಹತ್ತು ಬಾಳೆ ಕಂದನ್ನು ಕೊಯ್ದುಕೊಂಡಿದೆವೇ ಆದರೆ ಇನ್ನೆನೂ ಎಲ್ಲಾ ಕಟ್ಟಿ ಕೊಂಡು ಗೇಟ್ ದಾಟುವ ಮುನ್ನ ಹೊಲದ ಮಾಲಿಕನು ಬಂದು ಯಾವನ್ಲೇ ಅವನು ಎಂದನು ಈ ದ್ವನಿಯನ್ನು ಕೇಳಿ ದಿಕ್ಕಿಗೆ ಒಬ್ಬರು ಕಾಲುಕಿತ್ತೆವು ಆದರೆ ನಾನು ಮಾತ್ರ ಮಿನು ಬಲೆಗೆ ಬಿದ್ದಂತೆ ಆ ಮಾಲೀಕನ ಕೈಗೆ ಸಿಕ್ಕಿಹಾಕಿಕೊಂಡಿದೇನು.
ಯಜಮಾನ್ರೇ ಫ್ಲೀಸ್ ನನ್ನ ಬಿಟ್ಟುಬಿಡಿ ನಾಳೆ ನಮ್ಮ ನಾಡ ಹಬ್ಬ ಆದ್ದರಿಂದ ಕಾರ್ಯಕ್ರಮಕ್ಕಾಗಿ ಬಾಳೆ ಕಂದು ಬೇಕಿತ್ತು ಆದ್ಕೇ ಎಂದು ಸ್ಲೋ ಮೋಷನ್ ನಲ್ಲಿ ನುಡಿದೆನು ಆದರೆ ಅವರು ನನ್ನ ತುಂಬಾ ಬೈದು ಬೆಳಗಿನ ಜಾವ 5 ಗಂಟೆಯ ವರೆಗೆ ಮಿಷನ್ ರೂಮ್‍ಲ್ಲಿ ಕೂಡಿಹಾಕಿದನ್ನು ನೆನಸಿಕೊಂಡ್ರೇ ಹೀಗಲು ಎದೆ ಜಲ್ಲು ಎನ್ನುತೇ. ಆದು ಏನೆ ಹಾಗ್ಲಿ ಹರಿದು ಹಂಚಿ ಹೋಗಿರುವಂತಹ ಕನ್ನಡವನ್ನು ಕಟ್ಟುವಾಗ ಆಲೂರು ವೆಂಕಟರಾಯರು ಪಟ್ಟ ಕಷ್ಟದಷ್ಟು ನಾ ಏನು ಅನುಭವಿಸಿಲ್ಲ ಆದ್ದರಿಂದ ಇನ್ನೂ ನೂರು ಸಾರಿ ಹೊಲದ ಮಾಲೀಕನ ಕೈಗೆ ಸಿಕ್ಕಿಹಾಕಿಕೊಂಡ್ರೆನು? ನಾ ಕನ್ನಡಾಂಬೆಯ ಜನ್ಮದಿನವನ್ನು ನಮ್ಮೂರಲ್ಲಿ ಆಚರಿಸಿನೇ ತಿರುತೆನೇ,,,,, ಜೈ ಕರ್ನಾಟಕ ಮಾತೇ

ಸಂದೀಪ ಚಿಕ್ಕಮಲ್ಲನಹೊಳೆ ದಾವಣಗೆರೆ
ಮೊಬೈಲ್ 9731899315