ಚಿತ್ರದುರ್ಗ: ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಪಾಲಕ ಎಚ್. ಸತೀಶ್‌ನಾಯಕ್ ಅವರು ಡಾ.ಪಿ.ಎಸ್. ಪದ್ಮಮ್ಮ ಮಾರ್ಗದರ್ಶನದಲ್ಲಿ ಮಂಡಿಸಿದ ಯೂಸ್ ಪ್ಯಾಟರ್ನ್ ಆಫ್ ಇ-ರಿಸೋರ್ಸಸ್ ಬೈ ಫ್ಯಾಕಲ್ಟಿ ಮೆಂಬರ್‍ಸ್ ಆಫ್ ಮೆಡಿಕಲ್ ಕಾಲೇಜಸ್ ಆಫ್ ಡೀಮ್ಡ್ ಯುನಿವರ್ಸಿಟೀಸ್ ಇನ್ ಕರ್ನಾಟಕ : ಎ ಸ್ಟಡಿ ವಿಷಯಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಡಾಕ್ಟರೇಟ್ ಪದವಿಗೆ ಭಾಜನರಾದ ಸತೀಶ್‌ನಾಯಕ್ ಅವರಿಗೆ ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು, ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಕಾಲೇಜಿನ ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.