ಬಾಗಲಕೋಟೆ: ಮಾಜಿ ಸಚಿವೆ ನಟಿ ಉಮಾಶ್ರೀ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬಾಗಲಕೋಟೆ ಪೊಲೀಸರು ಒಂದೇ ವಾರದಲ್ಲಿ ಖದೀಮರನ್ನು ಸೆರೆ ಹಿಡಿದಿದ್ದಾರೆ. ಯಲ್ಲಪ್ಪಗಡ್ಡಿ, ದುರ್ಗಪ್ಪ ವಾಲ್ಮೀಕಿ ಬಂಧಿತ ಆರೋಪಿಗಳು.
ನವೆಂಬರ್​ 2 ರಂದು ಉಮಾಶ್ರೀರವರ ಮನೆಯಲ್ಲಿ ಕಳ್ಳತನವಾಗಿತ್ತು. ಅವರು ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1,94000 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.