ಚಿತ್ರದುರ್ಗ: ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ  ಘಟಕ ವೆಚ್ಚಕ್ಕೆ ಸರ್ಕಾರದ ಸಹಾಯಧನವಾಗಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.  ಯೋಜನೆಯಡಿ ಹೊಸ ಸಿಹಿನೀರಿನ ಸ್ಕ್ಯಾಂಪಿ ಹ್ಯಾಚರಿ,  ಸಿಹಿನೀರಿನ ಮೀನುಗಳ ಹ್ಯಾಚರಿ ಕೇಂದ್ರಗಳ ಸ್ಥಾಪನೆ,   ಹೊಸ ಮೀನು ಮರಿ ಉತ್ಪಾದನೆ ಹಾಗೂ ಪಾಲನಾ ಕೊಳಗಳ ನಿರ್ಮಾಣ, ಹೊಸ ಮೀನುಕೃಷಿ ಕೊಳಗಳ ನಿರ್ಮಾಣ, ಸಮಗ್ರ ಮೀನುಕೃಷಿ ಸ್ಕ್ಯಾಂಪಿ, ಫಂಗೇಶಿಯಸ್, ತಿಲಾಪಿಯಾ ಸೇರಿದಂತೆ ಸಿಹಿ ನೀರಿನ ಜಲಕೃಷಿಗೆ ಹೊಡಿಕೆ ವೆಚ್ಚಗಳು, ಸಿಹಿನೀರಿನ ಪ್ರದೇಶಗಳಿಗೆ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಆರ್.ಎ.ಎಸ್. ಘಟಕಗಳ ಸ್ಥಾಪನೆ, ಸಮಗ್ರ ಮೀನು ಸಾಕಾಣಿಕೆ ಇನ್ಪುಟ್ ಬೆಂಬಲ, ಅಲಂಕಾರಿಕ ಮೀನು, ಅಕ್ವೇರಿಯಂ ಮಾರುಕಟ್ಟೆಗಳ ನಿರ್ಮಾಣ, ಮೀನು ಮಾರುಕಟ್ಟೆಗಳು ಮತ್ತು ಮಾರಾಟ ಮೂಲ ಸೌಕರ್ಯ ಅಭಿವೃದ್ದಿ, ಮೀನು ಆಹಾರ ತಯಾರಿಕಾ ಘಟಕ ಸ್ಥಾಪನೆ, ಶ್ಯೆತ್ಯಾಗಾರ, ಮಂಜುಗಡ್ಡೆ ಸ್ಥಾವರಗಳ ಆಧುನೀಕರಣ ಶೈತ್ಯೀಕರಿಸಿದ ವಾಹನಗಳು, ಮೀನು ಮಾರಾಟಕ್ಕಾಗಿ ಐಸ್‍ಬಾಕ್ಸ್ ಹೊಂದಿದ ತ್ರಿಚಕ್ರ ವಾಹನ ಮತ್ತು ಐಸ್‍ಬಾಕ್ಸ್ ನೊಂದಿಗೆ ಮೋಟಾರ್ ಸೈಕಲ್‍ಗಳಿಗೆ ಸಹಾಯಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿಯನ್ನು  www.fisheries.karnataka.gov.in  ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಚಿತ್ರದುರ್ಗ 7353442282,  ಹಿರಿಯೂರು 9972010433, ಚಳ್ಳಕೆರೆ ಮತ್ತು ಮೊಳಕಾಲ್ಮೂರು 9342187356, ಹೊಸದುರ್ಗ ಹಾಗೂ ಹೊಳಲ್ಕೆರೆ 7029933310, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಚಿತ್ರದುರ್ಗ 08194-234004, 8147472440 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.