ಬೆಂಗಳೂರು: ಈ ವರ್ಷದ ಎರಡನೇ ಚಂದ್ರಗ್ರಹಣ ಇದೇ ಜೂ.5ರಂದು ಶುಕ್ರವಾರ ಸಂಭವಿಸಲಿದ್ದು, ರಾತ್ರಿ 11:15ರಿಂದ ಬೆಳಗಿನ ಜಾವ 2:34ಕ್ಕೆ ಅಂತ್ಯಗೊಳ್ಳಲಿದೆ.

ಒಟ್ಟು 3 ಗಂಟೆ 19 ನಿಮಿಷ ಅವಧಿಯನ್ನು ಹೊಂದಿರುವ ಈ ಗ್ರಹಣವು 12:54ಕ್ಕೆ ಪೂರ್ಣ ಸ್ವರೂಪದಲ್ಲಿ ರಾಜ್ಯ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಗ್ರಹಣದ ಗೋಚರತೆಯು ಶುಭ್ರ ವಾತಾವರಣ, ಮೋಡ ಮುಸುಕಿದ ಆಕಾಶ ಇದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಖಭೌತ ವಿಜ್ಞಾನಿಗಳು ತಿಳಿಸಿದ್ದಾರೆ.