ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ತಲೆಹೊಟ್ಟಿನ ಸಮಸ್ಯೆ ಇದ್ದೇ ಇದೆ. ತಲೆಹೊಟ್ಟು ಹೋಗಲಾಡಿಸಲು ಏನೆಲ್ಲಾ ಪ್ರಯತ್ನ ಪಡುತ್ತೀರ ಅಲ್ವಾ ಹಾಗಾದರೆ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ತಲೆ ಹೊಟ್ಟು ನಿವಾರಣೆ ಮಾಡಬಹುದು.!

ಟೀ ಟ್ರೀ ಆಯಿಲ್ ಅನ್ನು ಸ್ವಲ್ಪ ತೆಂಗಿನೆಣ್ಣೆ ಜತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ತಲೆಹಿಟ್ಟು ಕಡಿಮೆಯಾಗುವುದು, ಸೆನ್ಸಿಟಿವ್ ಸ್ಕಿನ್‌ನವರು ಟೀ ಟ್ರೀ ಆಯಿಲ್ ಹಚ್ಚಿದಾಗ ಕೆಲವೊಮ್ಮೆ ತುರಿಕೆ ಕಂಡು ಬರುವ ಸಾಧ್ಯತೆ ಇದೆ.

ತೆಂಗಿನೆಣ್ಣೆ: ತೆಂಗಿನೆಣ್ಣೆಯಿಂದ 8 ವಾರಗಳ ಕಾಲ ತಲೆಗೆ ಮಸಾಜ್ ಮಾಡಿದರೆ ಇತರ ಮಿನರಲ್‌ ಆಯಿಲ್ ಗ್ರೂಪ್‌ಗೆ ಹೋಲಿಸಿದರೆ ಶೇ. 68ರಷ್ಟು ಕಡಿಮೆಯಾಗುವುದು.

ಲೋಳೆಸರ ಕೂಡ ತಲೆಹೊಟ್ಟು ಸಮಸ್ಯೆ ನಿವಾರಿಸುವಲ್ಲಿ ಸಹಕಾರಿ. ತಾಜಾ ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

ಮಾನಸಿಕ ಒತ್ತಡ ಕಡಿಮೆ ಮಾಡಿ, ಆ್ಯಪಲ್ ಸಿಡರ್ ವಿನಿಗರ್ ಬಳಸುವುದು, ಒಮೆಗಾ 3 ಸೇವಿಸಿ. ಅಡುಗೆ ಸೋಡಾ, ತಲೆಯನ್ನು ಒದ್ದೆ ಮಾಡಿ ಅಡುಗೆ ಸೋಡಾ ಹಚ್ಚಿ ಒಂದು ನಿಮಿಷ ಬಿಟ್ಟು ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ಇಲ್ಲವಾಗುವುದು. ಸೂಚನೆ: ಅಡುಗೆ ಸೋಡಾ ಹಚ್ಚಿ ತುಂಬಾ ಹೊತ್ತು ಬಿಡಬೇಡಿ. ನಿಂಬೆ ಬಳಸುವುದು. ಮೊಸರು ಹಚ್ಚುವುದು, 10. ಹಾಲು ಮತ್ತು ಕರಿಬೇವು ಬಳಸುವುದರಿಂದ ತಲೆ ಹೊಟ್ಟು ನಿವಾರಣೆ ಮಾಡಬಹುದು.

ತಲೆ ಸ್ನಾನ ಮಾಡಿದ ನಂತರ, ಒಂದು ತಂಬಿಗೆ ನೀರಿಗೆ ಸ್ವಲ್ಪ ಗುಲಾಬಿ ನೀರನ್ನು (ರೋಸ್ ವಾಟರ್) ಸೇರಿಸಿ ತಲೆಗೆ ಹಚ್ಚಿಕೊಳ್ಳಿ.

ಅಲೋವೆರಾ ಪೇಸ್ಟ್ ಅನ್ನು ತಲೆಗೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಸಮ ಪ್ರಮಾಣದಲ್ಲಿ ಬೆರೆಸಿದ ಬೇವಿನ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಅದನ್ನು ತಲೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ಶಾಂಪೂ ಬಳಸಿ ತಲೆ ತೊಳೆದುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ.!