ಚಿತ್ರದುರ್ಗ: ಚಿತ್ರದುರ್ಗದ ಗೋನೂರು ಸಮೀಪದ ಖಾಲಿ ಜಾಗದಲ್ಲಿ ಬುಧವಾರ ಅವಧಿ ಮೀರಿದ ಬಿಯರ್ ದಾಸ್ತಾನನ್ನು ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತರು ಅವರ ಆದೇಶ ಮೇರೆಗೆ ನಾಶ ಪಡಿಸಲಾಯಿತು.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಸಮೀಪದ ಖಾಲಿ ಜಾಗದಲ್ಲಿ ಅಬಕಾರಿ ಅಧಿಕಾರಿಗಳು, ಅವಧಿ ಮೀರಿದ ಒಟ್ಟು 269 ಬಾಟಲಿಗಳಲ್ಲಿನ 188.25 ಲೀಟರ್, ಅಂದಾಜು ರೂ. 36,191  ಸಾವಿರ  ಮೌಲ್ಯದ ಬಿಯರ್ ದಾಸ್ತಾನನ್ನು ಗಾಜಿನ ಬಾಟಲಿಗಳ ಮುಚ್ಚಳ ತೆರೆದು ಪರಿಸರಕ್ಕೆ ಹಾನಿಯಾಗದಂತೆ ಚೆಲ್ಲುವ ಮೂಲಕ ನಾಶಪಡಿಸಲಾಯಿತು.

ಬಿಯರ್ ತಯಾರಾದ ಬಳಿಕ 6 ತಿಂಗಳ ಅವಧಿಯವರೆಗೆ ಬಳಸಲು ಅವಕಾಶವಿರುತ್ತದೆ. ಹೀಗಾಗಿ ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿಯಲ್ಲಿ ಅವಧಿ ಮೀರಿದ ಹಾಗೂ ಮೆದೇಹಳ್ಳಿ ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿಯಲ್ಲಿ ಅವಧಿ ಮೀರಿರುವ ಮಾನವ ಸೇವನೆಗೆ ಯೋಗ್ಯವಲ್ಲದ ಒಟ್ಟು 188.25 ಲೀ. ಬಿಯರ್ ಅವಧಿ ಮೀರಿದ್ದರಿಂದ ನಿಯಮಾನುಸಾರ ಇಲಾಖೆಯಿಂದ ನಾಶಪಡಿಸಲಾಗಿದೆ.

ಚಿತ್ರದುರ್ಗ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಎಸ್.ಎಂ.ಶಿವಹರಳಯ್ಯ, ಅಬಕಾರಿ ಉಪ ನಿರೀಕ್ಷಕರಾದ ಶಿವಪ್ರಸಾದ್, ದೇವರಾಜ್, ಪ್ರಭಾರಿ ಅಬಕಾರಿ ಸಬ್‍ಇನ್‍ಪೆಕ್ಟರ್ ಎ,ವನಿತಾ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.