ಕಾಬೂಲ್‌ : ಅಪಘಾತದಲ್ಲಿ ತೀವ್ರವಾಗಿ ಗಾಯೊಂಡರುವ ರಾಷ್ಟ್ರೀಯ ತಂಡದ ಪರ ಒಂದು ಏಕದಿನ ಮತ್ತು 12 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತಾರಕೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಲಾಲಾಬಾದ್ ನ ಪೂರ್ವ ನಂಗರ್ ಹಾರ್ ನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅ
ಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ಮಾಧ್ಯಮ ವ್ಯವಸ್ಥಾಪಕ ಇಬ್ರಾಹಿಂ ಮೊಮಂಡ್ ಅವರ ಪ್ರಕಾರ, ತಮ್ಮ ಹ್ಯಾಂಡಲ್ ನಿಂದ ಟ್ವೀಟ್ ಮಾಡಿ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. “ಮಾರಣಾಂತಿಕ ಅಪಘಾತಸಂಭವಿಸಿ 22 ಗಂಟೆಗಳು ಕಳೆದಿವೆ, ಆದರೆ ರಾಷ್ಟ್ರೀಯ ಕ್ರಿಕೆಟಿಗ ಕೋಮಾದಲ್ಲಿದ್ದಾರೆ. ಜಲಾಲಾಬಾದ್ ನಗರದಲ್ಲಿ ಕಾರು ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕಾಬೂಲ್ ಅಥವಾ ನೆರೆಯ ದೇಶಗಳ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ” ಎಂದು ಮೊಮಂಡ್ ಟ್ವೀಟ್ ಮಾಡಿದ್ದಾರೆ.