ಮಕ್ಕಳಿಗಾಗಿ, ಮುಂದಿನ ಜನಾಂಗಕ್ಕಾಗಿ, ಏನನ್ನೂ ಉಳಿಸದೆ, ಬದುಕಿಗೆ ಆಸ್ಪದವಿಲ್ಲದಂತ ಪರಿಸರ ನಿರ್ಮಾಣ ಮಾಡಿ, ಜೀವಿಸಲು ಅಸಾಧ್ಯವಾದಂತಹ ವಾತಾವರಣವನ್ನು ನಿರ್ಮಿಸಿ, ಮಕ್ಕಳಿಂದ ಬದುಕುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ, ಇಂತಹ ನಡತೆಯನ್ನು ನಾವು ಸರಿಪಡಿಸಿಕೊಂಡು, ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ಸುಂದರ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ಮಕ್ಕಳಿಗಾಗಿ ಕಲಾ ಚೈತನ್ಯ ಸೇವಾ ಸಂಸ್ಥೆ, ಪರಿಸರ ತಂಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ, ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಆಸ್ತಿ ಮಾಡುವುದು, ಹಣ ಸಂಗ್ರಹಿಸುವುದು, ಮಾಡುವುದಕ್ಕಿಂತ, ಸುಂದರ ಪರಿಸರವನ್ನು, ಸ್ವಚ್ಛವಾದ, ಗಾಳಿ, ನೀರು, ಮಣ್ಣನ್ನು, ಒದಗಿಸಿಕೊಡಬೇಕಾಗಿದೆ. ಅವರ ಆರೋಗ್ಯದ ದೃಷ್ಟಿಯಿಂದ, ಅವರ ಬದುಕಿಗೆ ಆಸರೆಯಾಗುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಡಬೇಕಾಗಿದೆ. ಪ್ಲಾಸ್ಟಿಕ್ನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ, ಏಕಾಏಕಿ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಅಷ್ಟು ಸುಲಭದ ಕೆಲಸವಲ್ಲ , ಬಳಸು ಮತ್ತು ಬಿಸಾಡು ಸಂಸ್ಕೃತಿ ಪರಿಸರ ಮಾಲಿನ್ಯವನ್ನು ಹೆಚ್ಚಿಸುತ್ತಿದೆ, ಪ್ಲಾಸ್ಟಿಕ್ ಮುಕ್ತ ವಾತಾವರಣ ಸೃಷ್ಟಿಸಲು ಜನರಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು ಹೆಚ್ಚಿಸಬೇಕಾಗಿದೆ. ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಬಿಗಿಗೊಳಿಸಬೇಕಾಗಿದೆ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದರು.
ಮಾಲಿನ್ಯ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ದಿನನಿತ್ಯ ಇನ್ನೂ ಸಹ ನಾವು ಸಮಾಜದಲ್ಲಿ ಕಾಣಬಹುದು. ನಮಗೆ ಅರಿವಿಲ್ಲದಂತೆಯೇ ಮಾಲಿನ್ಯಕಾರಕ ಕೆಲಸಗಳನ್ನು ನಾವು ಮಾಡುತ್ತಿರುತ್ತೇವೆ, ಅವುಗಳನ್ನು ಜಾಗೃತಗೊಳಿಸುವ ವ್ಯವಸ್ಥೆಯಾಗಬೇಕು ಎಂದರು.
ಕಲಾ ಚೈತನ್ಯ ಸಂಸ್ಥೆಯ ನಾಗರಾಜ್ ಬೇಂದ್ರೆಯವರು ಮಾತನಾಡುತ್ತಾ ಮಕ್ಕಳು ಉತ್ತಮ ಭವಿಷ್ಯದ ಕನಸು ಕಾಣುತ್ತಾ ಈ ಭೂಮಿಗೆ ಆಗಮಿಸುತ್ತಾರೆ, ಅವರ ಕನಸುಗಳನ್ನು ನಾವು ಮುರುಟ ಬಾರದು. ಕಲೆಯಲ್ಲಿ ಪರಿಸರದ ಚಿತ್ರಣವನ್ನು ಸೃಷ್ಟಿಸುವುದು ಸುಲಭ, ಆದರೆ ನಿಜವಾದ ಪರಿಸರವನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರ. ಮಕ್ಕಳು ಸುಂದರ ಪರಿಸರದ ಕನಸು ಕಂಡು, ಚಿತ್ರ ಬಿಡಿಸುವುದರಲ್ಲಿ ನಿರತರಾದಾಗ, ಸುಂದರ ಪರಿಸರವಿಲ್ಲದೆ ವಾತಾವರಣವನ್ನು ನಾವು ಹೊರಗಡೆ ಸೃಷ್ಟಿಸಿ ಕೊಡುತ್ತಿದ್ದೇವೆ. ಮಕ್ಕಳ ಸುಂದರ ಕನಸುಗಳು ನನಸಾಗುವಂತಹ ವಾತಾವರಣವನ್ನು ಸೃಷ್ಟಿ ಮಾಡಿ ಕೊಡೋಣ ಎಂದರು..
ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಶಾಲೆಯ ಆರ್ ಯಶ್ , ತೇಜಸ್, ಅನುಶ್ರೀ, ವಾಸವಿ ಶಾಲೆಯ ಪ್ರಣವ್, ಜಾಸ್ಮಿನ್, ಡಿಂಪಲ್, ಎಸ್.ಜೆ.ಎಂ.ನ. ಚಂದ್ರಶೇಖರ್, ಚೈತನ್ಯ ಶಾಲೆಯ ಸೈಯದ್, ಬೇದ್ರೆ ವರುಣ್, ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯ ಜಾಸ್ಮಿನ್, ಡಿಂಪಲ್, ಮುಂತಾದವರು ಭಾಗವಹಿಸಿದ್ದರು .