ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಮತದಾರರ ನೋಂದಣಿಗೆ ಇದೇ ಏಪ್ರಿಲ್ 14 ಅಂತಿಮ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಏಪ್ರಿಲ್ 14 ರೊಳಗಾಗಿ ಹೊಸದಾಗಿ ನೋಂದಣಿ, ತಿದ್ದುಪಡಿ, ಮತಗಟ್ಟೆ ವರ್ಗಾವಣೆ, ಕ್ಷೇತ್ರ ವರ್ಗಾವಣೆಗೆ ಸಂಬಂಧಿಸಿದಂತೆ ಬದಲಾವಣಗೆ ಅವಕಾಶ ಇರುತ್ತದೆ. ಆದರೆ ನಂತರವೂ ಸೇರ್ಪಡೆಗೆ ಅವಕಾಶ ಇದ್ದು 2018 ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
2

018 ರ ಜನವರಿ 1 ಕ್ಕೆ 18 ವರ್ಷ ತುಂಬಿರುವವರು, ಹೆಸರು ಕೈಬಿಟ್ಟು ಹೋಗಿರುವವರು ಪ್ರಸ್ತುತ ನಡೆಯುತ್ತಿರುವ ಚುನಾವಣೆಯಿಂದ ಹೊರಗುಳಿಯಬಾರದೆಂದು ಇದೇ ಏಪ್ರಿಲ್ 8 ರ ಭಾನುವಾರ ಎಲ್ಲಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಮಿಂಚಿನ ನೋಂದಣಿಯನ್ನು ಏರ್ಪಡಿಸಲಾಗಿದೆ. ಈ ವೇಳೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅರ್ಜಿಗಳನ್ನು ಸ್ವೀಕರಿಸುವರು. ಚುನಾವಣಾ ಆಯೋಗ ನೀಡಿರುವ ಈ ಅವಕಾಶವನ್ನು ಮಹಿಳೆಯರು, ಅಂಗವಿಕಲರು, ಯುವ ಮತದಾರರು ಹಾಗೂ ಎಲ್ಲಾ ವರ್ಗದ ಜನರು ಸದುಪಯೋಗ ಮಾಡಿಕೊಳ್ಳಲು ಕೋರಲಾಗಿದೆ.

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲು ಅನುಸರಿಸಬೇಕಾದ ಮಾನದಂಡ;
ನನಗೆ 18 ವರ್ಷವಾಗಿದ್ದು, ದಾಖಲೆಗಳೇನೂ ಇಲ್ಲ, ಮತದಾನದ ಹಕ್ಕು ಪಡೆಯುವುದು ಹೇಗೆ? ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ತಂದೆ-ತಾಯಿ ಅಥವಾ ಪೋಷಕರ ಮತದಾರರ ಗುರುತಿನ ಚೀಟಿಯ ಪ್ರತಿ, ಒಂದು ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಭರ್ತಿ ಮಾಡಿದ ಅರ್ಜಿಯನ್ನು ದ್ವಿಪ್ರತಿ ಸಲ್ಲಿಸುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.