ಎಂತ ಪ್ರಶ್ನೆ. ಈರುಳ್ಳಿ ಹಚ್ಚಿದಾಗ ಕಣ್ಣಲ್ಲಿ ನೀರು ಬರದೇ ಬೇರೆ ಏನಾದರೂ ಬರುತ್ತಾ. ಈರುಳ್ಳಿ ಹಚ್ಚಿದಾಗ ಕಣ್ಣಲ್ಲಿ ನೀರು ಏಕೆ ಬರುತ್ತದೆ ಅಂದರೆ, ಈರುಳ್ಳಿಯಲ್ಲಿ ಹಲವಾರು ಗಂಧಕಯುಕ್ತ ರಾಸಾಯನಿಕ ಗುಣಗಳನ್ನು ಹೊಂದಿರುತ್ತದೆ. ಮೀಥೈಲ್ ಸಲ್ಪೈಡ್, ಮೀಥೈಲ್ ಟ್ರೈಸಲೈಡ್ ಇತ್ಯಾದಿ ರಾಸಾಯನಿಕ ಗುಣಗಳನ್ನು ಹೊಂದಿರುವುದರಿಂದ, ಈರುಳ್ಳಿಯನ್ನು ತುಂಡರಿಸಿದಾಗ ಇವು ಗಾಳಿಯಲ್ಲಿ ಸೇರಿಕೊಂಡು ನಮ್ಮ ಕಣ್ಣೀಗೆ ತಗಲುವುದರಿಂದ, ಕಣ್ಣೀರಿನ ಗ್ರಂಥಿಗಳನ್ನು ಉದ್ರೇಖಿಸುವುದರಿಂದ ಕಣ್ಣೀರು ಬರುತ್ತದೆ.