ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ದುಬೈನಿಂದ ವಿಮಾನ ದಿಂದ ಚೆನ್ನೈಏರ್ ಪೋಟ್‌ಗೆ ಆಗಮಿಸಿರುವ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಅವರಿಂದ 1.42 ಕೆಜಿ ಚಿನ್ನ ಸಹಿತ 85 ಲಕ್ಷ ರೂ. ಮೌಲ್ಯದ ಇತರ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊ0ಡಿರುವ ವಸ್ತುಗಳ ಪೈಕಿ 72.6ಲಕ್ಷ ರೂ. ಬೆಲೆ ಬಾಳುವ 1.42  ಕೆಜಿ ತೂಕದ ಚಿನ್ನ, ಒಟ್ಟು 12.8ಲಕ್ಷ ರೂ. ಮೌಲ್ಯದ ಸಿಗರೇಟ್ ಗಳು, ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚೆನ್ನೈ ಏರ್ ಕಸ್ಟಮ್ಸ್ ಮಾಹಿತಿ ನೀಡಿದ್ದಾರೆ. ಇಬ್ಬರು ಆರೋಪಿಗಳು ಗುದನಾಳದಲ್ಲಿ ಗೋಲ್ಡ್ ಪೇಸ್ಟ್ ಸಾಗಿಸುತ್ತಿರುವುದು ಕಂಡುಬAದಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ಲಗೇಜ್ ತಪಾಸಣೆಯ ವೇಳೆ ಇತರ ವಸ್ತುಗಳನ್ನು ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.