ಸಜ್ಜೆ ರೊಟ್ಟಿ ಕುಂಬಳಕಾಯಿ ಘಣನಾಥ. ಈ ಹಾಡು ಕೇಳಿದ್ದೀರ ಹಾಗೇ ತಿಂದಿರುತ್ತೀರ ಅಲ್ವ. ಆದ್ರೆ ಸಜ್ಜೆಯ ಬಳಕೆಯಿಂದ ನಮ ದೇಹಕ್ಕೆ ಬಹಳ ಉಪಯೋಗಗಳು ಹಾಗೂ ಹಲವಾರು ಜೀವಸತ್ವಗಳ ಆಗರ.

ಈ ಸಿರಿಧಾನ್ಯ ವಿವಿಧ ಬಗೆಯ ಹವಾಗುಣಗಳಲ್ಲಿ ಬೆಳೆಯುತ್ತದೆ. ಸಜ್ಜೆಯು ಕ್ಯಾಲ್ಸಿಯಂ, ಮೆಗ್ನಿಷಿಯಂ, ಜೀವಸತ್ವ’ಎ’ ಹಾಗೂ ‘ಬಿ’ ಗಳ ಆಗರವಾಗಿದೆ. ಬೇರೆ ಸಿರಿಧಾನ್ಯಗಳಿಗಿಂತ ಸಜ್ಜೆ ನಮ್ಮ ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.