ಬೆಂಗಳೂರು: ಕೊರೋನಾ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಬೆಚ್ಚಿಬೀಳಿಸುವಂತಹ ಮಾಹಿತಿ ನೀಡಿದೆ. ಕೊರೋನಾಗೆ ಅಂತ್ಯ ಯಾವಾಗ ಎಂದು ಹೇಳಲಾಗುವುದಿಲ್ಲ, ಅದು ನಿರ್ನಾಮವಾಗದೇ ಉಳಿಯಬಹುದು’ ಎಂದು ಹೇಳಿದೆ.

ಎಚ್​ಐವಿ ಹಾಗೆಯೇ ಕೊರೋನಾ ಕೂಡಾ ನಮ್ಮ ಸಮುದಾಯಗಳಲ್ಲಿ ಮತ್ತೊಂದು ವೈರಸ್ ಆಗಬಹುದು. ಜೊತೆಗೆ ಈ ವೈರಸ್ ದೀರ್ಘಕಾಲ ಇರಬಹುದು ಎಂದು WHO ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಹೇಳಿದ್ದಾರೆ.