ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್‌ಗೆ ಭೇಟಿ ನೀಡಿದ ಅಚ್ಚರಿಯ ಭೇಟಿಯ ನಂತರ ಚೀನಾ ಪ್ರತಿಕ್ರಿಯಿಸಿದ್ದು, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್ ಹೇಳಿಕೆ ನೀಡಿದ್ದು, “ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದೆ, ಈ ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಅಂತ ಹೇಳಿಕೊಂಡಿದ್ದಾರೆ.

ಸಿಒಎಎಸ್ ಜನರಲ್ ನಾರವಾನೆ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಪಿಎಂ ಮೋದಿ ಇಂದು ಲಡಾಖ್ನ ಮುಂದಿನ ಪ್ರದೇಶಗಳಿಗೆ ಭೇಟಿ ನೀಡಿದರು.ಎಲ್‌ಎಸಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿಗೆ ಭಾರತೀಯ ಸೇನೆಯ 14 ಕಾರ್ಪ್ಸ್ ಕಮಾಂಡರ್ ವಿವರಿಸಿದರು. ಚೀನಾದ ಪಿಎಲ್‌ಎ ಜೊತೆಗಿನ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಸೇನಾ ಸೈನಿಕರನ್ನು ಪಿಎಂ ಭೇಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.