ನವದೆಹಲಿ : MCA ವ್ಯಾಸಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಎಂಸಿಎ ಕೋರ್ಸ್ ಅವಧಿಯನ್ನು ಇಳಿಕೆ ಮಾಡಿದೆ.

ಬಿಸಿಎ ಹಾಗೂ ಬಿಎಸ್ಸಿ ಕೋರ್ಸ್ ಅವಧಿ ಮೂರು ವರ್ಷಗಳಾಗಿದ್ದು, ಬಳಿಕ ಎಂಸಿಎ ವ್ಯಾಸಂಗ ಮಾಡಲು 3 ವರ್ಷಗಳಾಗಿತ್ತು. ಇದೀಗ ಮೂರು ವರ್ಷಗಳಿದ್ದ ಎಂಸಿಎ ಕೋರ್ಸ್ ಅವಧಿಯನ್ನು ಈಗ ಎರಡು ವರ್ಷಗಳಿಗೆ ಸೀಮಿತಗೊಳಿಸಿ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಆದೇಶ ಹೊರಡಿಸಿದೆ. 2020-21 ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದೆ.