ನವದೆಹಲಿ: ಕೇಂದ್ರ ಸರ್ಕಾರವು LPG ಸಿಲಿಂಡರ್ ಮೇಲಿನ ಸಬ್ಸಿಡಿ ದರವನ್ನು ದ್ವಿಗುಣಗೊಳಿಸಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬಳಸುವವರಿಗೆ ಈ ಹಿಂದೆ ನೀಡಲಾಗುತ್ತಿದ್ದ 153.86 ರೂ.ಅನ್ನು ಇದೀಗ 291.48 ರೂ.ಗೆ ಹೆಚ್ಚಿಸಲಾಗಿದೆ.

ಸಬ್ಸಿಡಿ ಹಣವು ನೇರವಾಗಿ ಬಳಕೆದಾರರ ಖಾತೆಗೆ ಜಮೆ ಆಗಲಿದೆ. ಪ್ರಧಾನಮಂತ್ರಿ ಉಜ್ವಲ ಫಲಾನುಭವಿಗಳಿಗೆ 174.86 ರೂ.ಇದ್ದ ಸಬ್ಸಿಡಿ ದರವನ್ನು ಇದೀಗ 312.48 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು, ಸಬ್ಸಿಡಿ ರಹಿತ ಸಿಲಿಂಡರ್ ದರ 144.5 ರೂ.ಯಿಂದ 150 ರೂ.ಹೆಚ್ಚಿಸಲಾಗಿದೆ.