ದೆಹಲಿ: ಲಾಕ್ ಡೌನ್ ಘೋಷಣೆಯಾದ ಬಳಿಕ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಿದ್ದ ಆರ್ ಬಿಐ ಈಗ ಮತ್ತೆ ಮೂರು ತಿಂಗಳ ಇಎಂಐ ಪಾವತಿಯನ್ನು ಮುಂದೂಡಿಕೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗವರ್ನರ್ ಶಕ್ತಿಕಾಂತ್ ದಾಸ್, ಲಾಕ್ ಡೌನ್ ಹಿನ್ನಲೆಯಲ್ಲಿ ಇಎಂಐ ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ಮುಂದೂಡಿಕೆ ಮಾಡುವುದಾಗಿ ಹೇಳಿದರು. ಜೂನ್ ಒಂದರಿಂದ ಆಗಸ್ಟ್ 31ರ ವರೆಗೆ ಜನರು ಇಎಂಐ ಪಾವತಿ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.