ಬೆಂಗಳೂರು: ಸ್ಯಾಂಡಲ್’ವುಡ್’ನಲ್ಲಿ ಅನೇಕ ಪ್ರಾಜೆಕ್ಟ್’ಗಳಲ್ಲಿ ಸದ್ಯ ಬ್ಯುಸಿಯಾಗಿರುವ ನಟ ದರ್ಶನ್ ಅತ್ಯಂತ ಬೇಡಿಕೆಯ ನಟ. ಆದರೆ, ವಿಷಯವೇನೆಂದರೆ ಅನೇಕ ವರ್ಷಗಳ ನಂತರ ಡಿ ಬಾಸ್ ಮತ್ತು ಸಾಧು ಕೋಕಿಲ ಒಂದಾಗುತ್ತಿದ್ದಾರೆ. ಸುಂಟರಗಾಳಿ ಸಿನಿಮಾದ ನಂತರ ಡಿಬಾಸ್ ದರ್ಶನ್’ಗೆ ಸಾಧು ಕೋಕಿಲ ಅಕ್ಷನ್ ಕಟ್ ಹೇಳುತ್ತಿರುವುದು ಇಂಟ್ರಸ್ಟಿಂಗ್ ವಿಷಯ.

ಹೌದು, ನಟ ದರ್ಶನ್ ಕೈಯಲ್ಲಿ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಅತ್ಯಂತ ಬ್ಯುಸಿ ಇರುವ ನಟ ದರ್ಶನ್ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದಾಗಿ ಖಾಸಗಿ ವಾಹಿನಿವೊಂದರಲ್ಲಿ ಹೇಳಿಕೊಂಡಿದ್ದಾರೆ. ರಕ್ತ ಕಣ್ಣೀರು’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಸಾಧು ಕೋಕಿಲ ಅವರು, ದರ್ಶನ ನಟನೆಯ ಅನಾಥರು, ಸುಂಟರಗಾಳಿ ಸಿನಿಮಾಗಳಿಗೂ ಅಕ್ಷನ್ ಕಟ್ ಹೇಳಿದ್ದರು. ಈಗ ಮತ್ತೊಂದು ಸಿನಿಮಾ ಅವರನ್ನು ಒಂದು ಮಾಡುತ್ತಿದೆ.

ದರ್ಶನ ನಟನೆಯ ಈ ಸಿನಿಮಾಗೆ ಸಾಧು ಕೋಕಿಲ ಅವರೇ ಸಂಗೀತ ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ. ಡಿಬಾಸ್ ಮತ್ತು ಸಾಧು ಕೋಕಿಲ ಜೋಡಿಯ ಸಿನಿಮಾ ಸಕತ್ ಸೌಂಡ್ ಮಾಡಲಿ ಎನ್ನುವುದು ಅಭಿಮಾನಿಗಳ ಹಾರೈಕೆ. ಚಿತ್ರಕ್ಕೆ ಇನ್ನು ಹೆಸರು ನಿಗದಿಯಾಗಿಲ್ಲ. ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.

ಇಲ್ಲಿದೆ ನೋಡಿ ವಿಡಿಯೋ: