ಮುಂಬೈ: ಹಿರಿಯ ನೃತ್ಯ ಸಂಯೋಜಕಿ ವಿಧಿವಶರಾಗಿದ್ದಾರೆ. ಅವರು ಜೂನ್ 20 ರಂದು ಮುಂಬೈನ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ ದಾಖಲಾಗಿದ್ದರು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಘಾತಕ್ಕೆ ಈಡಾಗಿದ್ದಾರೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಇನ್ನು ಸರೋಜ್ ಖಾನ್ ಅವರ ಅಂತಿಮ ವಿಧಿಗಳನ್ನು ಇಂದು ಮುಂಬೈನ ಮಲಾದ್‌ನ ಮಾಲ್ವಾನಿ ಯಲ್ಲಿ ನೆರವೇರಿಸಲಾಗುವುದು ಎನ್ನಲಾಗಿದೆ.

ಸರೋಜ್​ ಖಾನ್​ ಅವರು, ನಟಿ ಶ್ರೀದೇವಿ ಅಭಿನಯಿಸಿದ್ದ ನಾಗಿನಾ ಚಿತ್ರದ ‘ಮೇನ್​ ನಾಗಿನ್​ ತು ಸಪೆರಾ’ ಮತ್ತು ಮಿಸ್ಟರ್​ ಇಂಡಿಯಾ ಸಿನಿಮಾದ ‘ಹವಾ ಹವಾ’ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು 80ರ ದಶಕದಲ್ಲಿ ಬಾಲಿವುಡ್​ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು.