ತುಮಕೂರು: ವೃದ್ಧಾಪ್ಯ ವೇತನಕ್ಕಾಗಿ ಇನ್ಮುಂದೆ ಕಚೇರಿಗಳಿಗೆ ಅಲೆಯುವಂತಿಲ್ಲ, 60 ವರ್ಷ ದಾಟಿದ ಕೂಡಲೇ ಅರ್ಜಿ ಹಾಕದಿದ್ದರೂ ವೃದ್ಧಾಪ್ಯ ವೇತನ ಸಿಗಲಿದೆ. ಅಂತಹ ಸೌಲಭ್ಯವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ವೃದ್ಧಾಪ್ಯ ವೇತನ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ನಿತ್ಯ ಕೇಳಿಬರುತ್ತಿವೆ. ಅಂಚೆ ಕಚೇರಿಯಿಂದ ನಿಗದಿತ ಸಮಯಕ್ಕೆ ಸರಿಯಾಗಿ ವೃದ್ಧರಿಗೆ ಪಿಂಚಣಿ ತಲುಪುತ್ತಿಲ್ಲ. ಪಿಂಚಣಿ ತಲುಪಿಸಲು ಅಂಚೆ ಅಧಿಕಾರಿಗಳು ಕಮಿಷನ್ ಹಣ ಪಡೆಯುತ್ತಿದ್ದ ಮತ್ತು ಮೂರು ನಾಲ್ಕು ತಿಂಗಳಿಗೆ ಒಂದೇ ಬಾರಿ ನೀಡುತ್ತಿದ್ದ ಸಂಗತಿಗಳು ಕಂಡುಬಂದಿವೆ. ಅದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಈ ಯೋಜನೆಯಡಿಯಲ್ಲಿ ಈಗಾಗಲೇ ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುಮಾರು 10 ಸಾವಿರ ಮಂದಿಗೆ ನೀಡಿದ್ದು, ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.