ಬೆಂಗಳೂರು: ಸರಕಾರ ಕಡ್ಡಾಯ ವರ್ಗಾವಣೆಯನ್ನು ಕೈಬಿಡಲಾಗಿದೆ. ಜೊತೆಗೆ  50 ವರ್ಷ ಮೀರಿದ ಶಿಕ್ಷಕಿರು ಮತ್ತು 55 ವರ್ಷ ದಾಟಿದ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ನೀಡಲಾಗಿದೆ.!

ಹಲವು ಬದಲಾವಣೆಗಳೊಂದಿಗೆ ಶಿಕ್ಷಕರ ವರ್ಗಾವಣೆ ನಿಯಮ ಕರಡನ್ನು ಸರ್ಕಾರ ಪ್ರಕಟಿಸಿದೆ. ಜೂನ್ 25ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಕಡ್ಡಾಯ ವರ್ಗಾವಣೆಯನ್ನು ಕೈಬಿಡಲಾಗಿದ್ದು, 50 ವರ್ಷ ಮತ್ತು 55 ವರ್ಷದ ಶಿಕ್ಷಕಿಯರು ಹಾಗೂ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ.

ಶೇಕಡ 20 ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳು ಇರುವ ತಾಲೂಕುಗಳಿಗೆ ಮಾತ್ರ ವರ್ಗಾವಣೆ ಮಾಡಬೇಕು ಎನ್ನುವ ಮಾನದಂಡವನ್ನು ಕೂಡ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.