ಹೈದರಾಬಾದ್:  ಆಗಸ್ಟ್ 11ರಂದು ಅಂಕುರಾರ್ಪಣೆ ಕಾರ್ಯಕ್ರಮವಿದ್ದು, ಅಂದು 30ರಿಂದ 35 ಸಾವಿರ ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನ ಭಾಗ್ಯವಿದೆ. ಆಗಸ್ಟ್ 12 ರಿಂದ 16 ವರೆಗೆ ಐದು ದಿನಗಳ ಕಾಲ ಯಾರಿಗೂ ಪ್ರವೇಶವಿರುವುದಿಲ್ಲ ಎಂದು ಕಮಿಟಿ ಹೇಳಿದೆ..

ಏಕೆಂದ್ರೆ ತಿರುಪತಿ ತಿರುಮಲ ದೇವಾಲಯದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಬಾಲಾಲಯ ಮಹಾ ಸಂಪ್ರೋಕ್ಷಣಂ ನಿಮಿತ್ತ ಭಕ್ತಾಧಿಗಳಿಗೆ ಆಗಸ್ಟ್ 12ರಿಂದ 16ರವರೆಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿರುವುದಿಲ್ಲ. ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ ಈ ಕುರಿತು ಮಾಹಿತಿ ನೀಡಿದ್ದು, ಈ ಆಚರಣೆ ವೇಳೆ ದೇವಸ್ಥಾನ ಸಿಬ್ಬಂದಿಗಳಿಗೂ ಒಳ ಪ್ರವೇಶಿಸಲು ಅವಕಾಶವಿರುವುದಿಲ್ಲವಂತೆ ಹಾಗಾಗಿ ತಿರುಪತಿಗೆ ಹೋಗುವ ಭಕ್ತರಿಗೆ ಆಗಸ್ಟ್ 12 ರಿಂದ 16 ವರೆಗೆ ತಿಮ್ಮಪ್ಪನ ದರ್ಶನವಿಲ್ಲ.