ನವದೆಹಲಿ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವು ದಿನೇ ದಿನೇ ತಗ್ಗುತ್ತಿದ್ದರೂ ಸಹ ಕೊರೊನಾವೈರಸ್ ಪ್ರಕರಣಗಳು ಇನ್ನೂ ಸಾವಿರಾರು ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,946ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದೆ.
ಇದರಲ್ಲಿ  17,652ಡಿಸ್ಚಾರ್ಜ್ ಮತ್ತು 198 ಸಾವುಗಳು ದಾಖಲಾಗಿದೆ. ಒಟ್ಟು ಪ್ರಕರಣಗಳು 1,05,12,093 ರಷ್ಟಿದ್ದು, ಸಕ್ರಿಯ ಪ್ರಕರಣಗಳು 2,13,603 ಒಟ್ಟು ಡಿಸ್ಚಾರ್ಜ್ 1,01,46,763 ಮತ್ತು ಸಾವಿನ ಸಂಖ್ಯೆ 1,51,727ರಷ್ಟಿದೆ.
ಇದುವರೆಗೂ ಒಟ್ಟು 18,42,32,305 ಮಾದರಿಗಳನ್ನು ಕೋವಿಡ್-19 ಪರೀಕ್ಷಿಸಲಾಗಿದ್ದು, ಜನವರಿ 13  ರವರೆಗೆ ಇದರಲ್ಲಿ7,43,191 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ದೇಶದಲ್ಲಿ ಜನವರಿ ೧೬ ರಂದು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಪ್ರಾರಂಭಿಸುವ ಮುನ್ನ, ಕೋವಿಶೀಲ್ಡ್ ಲಸಿಕೆಯನ್ನು ಒಳಗೊಂಡಿರುವ ಮೊದಲ ಸರಕನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿ0ದ ಮಂಗಳವಾರ ಮುಂಜಾನೆ ಎಲ್ಲ ಕಡೆಗೂ ತಲುಪಿಸಲಾಗಿದೆ.

.