ಚಿತ್ರದುರ್ಗ:  ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಎದುರಿಗೆ ಇರುವ ಪೊಲೀಸ್ ಕ್ವಾಟ್ರಸ್ ನಿವಾಸಿ 105 ವರ್ಷದ ಸಿದ್ದಮ್ಮ ಕೊರೋನಾ ಗೆದ್ದು ಹೊರಬಂದಿದ್ದಾಳೆ.!

ಕರೊನಾ ವಿರುದ್ಧ ಗೆದ್ದು ಬೀಗುತ್ತಿರುವ ಸುದ್ದಿಗಳು ಬುದುಕಿಗೆ ಜೀವ ಸೆಲೆಯಂತೆ ಗೋಚರಿಸುತ್ತಿವೆ. ‘ಕರೊನಾ ಅಪಾಯಕಾರಿ ರೋಗವಲ್ಲ, ವಿನಾಕಾರಣ ಭಯ ಬೇಡ. ಆದರೆ, ಎಚ್ಚರಿಕೆ ಇರಲಿ’ ಎಂಬುದುಕ್ಕೆ ಸಿದ್ದಮ್ಮ ಅಜ್ಜಿಯೇ ಸಾಕ್ಷಿ

ಸಿದ್ದಮ್ಮ ಜು.27ರಂದು ಕರೊನಾ ಸೋಂಕು ದೃಢಪಟ್ಟಿತ್ತು. 28ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದೆರೆ  ನಾಲ್ಕೇ ದಿನದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದ ಸಿದ್ದಮ್ಮ ಅಜ್ಜಿಯನ್ನು ಇಂದು(ಶನಿವಾರ) ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.