ನವದೆಹಲಿ; ಕೊರೋನಾ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿಯ ವೇಳೆ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿಷೇಧ ವಿಧಿಸಿದೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ಶಾಲಾ ಕಾಲೇಜುಗಳನ್ನು ನ. 16ರ ವರೆಗೂ ಮುಚ್ಚಲು ಇದೇ ವೇಳೆ ಗೆಹ್ಲೋಟ್ ಸರ್ಕಾರ ತೀರ್ಮಾನ ಮಾಡಿದೆ. ನೋ ಮಾಸ್ಕ್ ನೋ ಎಂಟ್ರಿ ವಾರ್ ಫಾರ್ ಪ್ಯೂರ್ ಎಂಬ ಅಭಿಯಾನವನ್ನು ಸರ್ಕಾರ ಆರಂಭ ಮಾಡುತ್ತಿದೆ.