ನವದೆಹಲಿ: ಭಾರತದಲ್ಲಿ ಕೋವಿಡ್-19  ಲಸಿಕೆಯ ಸಿದ್ಧತೆಯು ಅಂತಿಮ ಹಂತದಲ್ಲಿ ಇದೆ. ಈಗಾಗಲೇ ದರವನ್ನು ಕೂಡ ನಿಗದಿಪಡಿಸಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದೊ0ದಿಗೆ ಸರ್ಕಾರವು ಮೊದಲ ಖರೀದಿ ಒಪ್ಪಂದವನ್ನು ಮಾಡಿಕೊಂಡಿರುವುದರಿAದ ಮೊದಲ ಹಂತದಲ್ಲಿ ದೇಶದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ಧ ಪ್ರಧಾನಿ ನರೇಂದ್ರ ಮೋದಿ ಲಸಿಕೆಯ ಸಿದ್ಧತೆ, ಹಂಚಿಕೆ ಮತ್ತು ದರದ ಕುರಿತು ತಿಳಿಸಿದರು. ಈ ವೇಳೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುವುದು. ಯಾವುದೇ ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದರು.
ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!

ಜನವರಿ 16 ರಿಂದ ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಲಿದೆ. ಕಳೆದ ಸುಮಾರು ಒಂದು ತಿಂಗಳಲ್ಲಿ, ವಿವಿಧ ರಾಷ್ಟ್ರಗಳ ೨.೫ ಕೋಟಿ ಜನರಿಗೆ ಮಾತ್ರ ಲಸಿಕೆ ಲಭ್ಯವಾಗಿದೆ. ಆದರೆ ಭಾರತದಲ್ಲಿ ಮುಂದಿನ ಕೆಲವು ತಿಂಗಳಿನಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು ಎಂದಿದ್ದಾರೆ.

ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಒಂದು ವೇಳೆ ಬೇರೆ ರಾಷ್ಟ್ರಗಳಿಂದ ತರಿಸಿಕೊಳ್ಳುವುದಾದರೆ ತುಂಬಾ ಕಷ್ಟಗಳನ್ನು ಎದುರಿಸಬೇಕಾಗಿತ್ತು ಎಂದರು.

ಕೇAದ್ರವು ಪುಣೆ ಮೂಲದ ಎಸ್‌ಐಐ ಜೊತೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಎಸ್‌ಐಐ ಭಾರತದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಅವರಿಂದ ಕೋವಿಡ್ -೧೯ ಲಸಿಕೆ ತಯಾರಿಸುತ್ತಿದೆ, ಮೊದಲ ಬಾರಿಗೆ ಸುಮಾರು 11 ಮಿಲಿಯನ್ ಡೋಸ್‌ಗಳನ್ನು ಪೂರೈಸಲು, ತಲಾ ೨೦೦ ರೂ. ದರ ನಿಗದಿಪಡಿಸಿದೆ.

ಇದಲ್ಲದೆ ಕೇಂದ್ರವು ಭಾರತ್ ಬಯೋಟೆಕ್ ಜೊತೆ ಸುಮಾರು ೪ ಮಿಲಿಯನ್ ಡೋಸ್‌ಗಳಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಲಸಿಕೆಯ ಪ್ರತಿ ಡೋಸ್‌ನ ಬೆಲೆ ಸುಮಾರು 300 ರೂಪಾಯಿನಷ್ಟಿದೆ.